ಹಾಡಹಗಲೇ ರಾಜಾರೋಷವಾಗಿ ನಡೆದಿದೆ ಕಾಪಿ; ಬಿಹಾರ ಪರೀಕ್ಷಾ ಕರ್ಮಕಾಂಡದ ವಿಡಿಯೋ ವೈರಲ್

ಬಿಹಾರದಲ್ಲಿ ಪರೀಕ್ಷೆಗಳು ಯಾವ ರೀತಿ ನಡೆಯುತ್ತದೆ ಎಂಬುದರ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಈ ಹಿಂದೆ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದ ವಿದ್ಯಾರ್ಥಿನಿಯೊಬ್ಬಳು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆ ಎದುರಿಸಲಾಗದೆ ಸಿಕ್ಕಿಬಿದ್ದಿದ್ದಳು.

ಬಳಿಕ ನಡೆದ ತನಿಖೆಯಲ್ಲಿ ಆಕೆ ಅಕ್ರಮವಾಗಿ ರಾಂಕ್ ಪಡೆದಿರುವುದು ಬೆಳಕಿಗೆ ಬಂದ ನಂತರ ಜೈಲು ಪಾಲಾಗಿದ್ದಳು. ಇದೇ ರೀತಿ ಹಲವರು ಸಹ ಪರೀಕ್ಷಾ ಅಕ್ರಮ ಕಾರಣಕ್ಕೆ ತನಿಖೆ ಎದುರಿಸಿದ್ದರು.

ಇಷ್ಟಾದರೂ ಬಿಹಾರ ಪರೀಕ್ಷಾ ಮಂಡಳಿ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಇತ್ತೀಚೆಗೆ ನಡೆದ ಬಿಹಾರ ಬೋರ್ಡ್ ಎಕ್ಸಾಮಿನಲ್ಲಿ ಸಮಸ್ಟಿ ಪುರದ ಸಂತ ಕಬೀರ್ ಕಾಲೇಜಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ರಾಜಾರೋಷವಾಗಿ ಕಾಪಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಈ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಸ್ನೇಹಿತರು, ಸಂಬಂಧಿಕರು ಉತ್ತರ ಪೂರೈಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಇದನ್ನು ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

https://twitter.com/kumarprakash4u/status/1626162805274734592?ref_src=twsrc%5Etfw%7Ctwcamp%5Etweetembed%7Ctwterm%5E1626162805274734592%7Ctwgr%5E%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fbihar-board-exams-caught-on-camera-students-copy-in-broad-daylight-at-a-college-in-samastipur-watch-video

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read