ಹಾಗಲಕಾಯಿ ಆರೋಗ್ಯದ ಪ್ರಯೋಜನ ಬಗ್ಗೆ ತಿಳಿಯಿರಿ

ಹಾಗಲಕಾಯಿ ಕಹಿ ಎಂಬ ಕಾರಣಕ್ಕೆ ಅದನ್ನು ದೂರವಿಡಬೇಡಿ. ಅದರಲ್ಲಿರುವ ಆರೋಗ್ಯದ ಪ್ರಯೋಜನಗಳ ಬಗ್ಗೆ ತಿಳಿಯಿರಿ. ಇದರಲ್ಲಿ ಹೇರಳವಾದ ಖನಿಜಗಳು ಮತ್ತು ಜೀವಸತ್ವಗಳಿದ್ದು ಹಲವು ಬಗೆಯ ರೋಗಗಳಿಂದ ಇದು ಮುಕ್ತಿ ನೀಡುತ್ತದೆ.

ಇದರಲ್ಲಿ ಪಾಲಕ್ ಸೊಪ್ಪಿನಲ್ಲಿರುವುದಕ್ಕಿಂತ ಎರಡು ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದ್ದು ಮೂಳೆಗಳನ್ನು ಬಲಪಡಿಸಲು ನೆರವಾಗುತ್ತದೆ. ಇದರ ರಸದಲ್ಲಿರುವ ವಿಟಮಿನ್ ಎ ಮತ್ತು ಸಿ ತ್ವಚೆಯಲ್ಲಿ ಮೂಡುವ ನೆರಿಗೆ ಸುಕ್ಕುಗಳು ಬರದಂತೆ ತಡೆಯುತ್ತದೆ.

ಮೊಡವೆಗಳನ್ನೂ ಕಡಿಮೆ ಮಾಡುವ ಇದು, ಸೋರಿಯಾಸಿಸ್ ಮೊದಲಾದ ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತದೆ. ಯುವಿ ಕಿರಣಗಳಿಂದ ಹಾನಿಯಾಗುವ ತ್ವಚೆಯನ್ನೂ ರಕ್ಷಿಸುತ್ತದೆ.

ಹಾಗಲಕಾಯಿ ರಸ ಯಕೃತ್ತಿನ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹಿಗಳು ಇದನ್ನು ವಾರಕ್ಕೆರಡು ಬಾರಿ ತಿನ್ನುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read