ಹಸುವಿಗೆ ಈ ʼಆಹಾರʼ ನೀಡಿದ್ರೆ ಪ್ರಾಪ್ತಿಯಾಗುತ್ತೆ ಸುಖ-ಸಮೃದ್ಧಿ

ಹಿಂದೂ ಧರ್ಮದಲ್ಲಿ ಹಸುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಸುವನ್ನು ತಾಯಿಗೆ ಹೋಲಿಕೆ ಮಾಡಲಾಗುತ್ತದೆ. ಬಹುತೇಕ ಮನೆಗಳಲ್ಲಿ ಹಸುವಿನ ಪೂಜೆ ನಡೆಯುತ್ತದೆ. ಹಸುವಿನ ದೇಹದಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿವೆ ಎಂಬ ನಂಬಿಕೆಯಿದೆ.

ಹಸುವಿಗೆ ಆಹಾರ ತಿನ್ನಿಸುವ ಅರ್ಥವೇನೆಂದ್ರೆ 33 ಕೋಟಿ ದೇವಾನುದೇವತೆಗಳ ಸೇವೆ ಮಾಡಿದಂತೆ. ರಾಜನೊಬ್ಬನು ಹಸುವಿನ ಸೇವೆ ಮಾಡಿದ ಮೇಲೆ ಆತನಿಗೆ ಸಂತಾನ ಪ್ರಾಪ್ತಿಯಾಗಿತ್ತಂತೆ. ಹಸುವಿನ ಸೇವೆಯಿಂದ ಸಾಕಷ್ಟು ಪ್ರಯೋಜನವಿದೆ. ಹಾಗೆ ಗೋದಾನ ಕೂಡ ಮಹಾ ದಾನಗಳಲ್ಲಿ ಒಂದು.

ಹಸುವಿಗೆ ಆಹಾರ ತಿನ್ನಿಸುವುದ್ರಿಂದ ಸಾಕಷ್ಟು ಲಾಭವಿದೆ. ನಿಯಮಿತ ರೂಪದಲ್ಲಿ ಹಸುವಿಗೆ ಆಹಾರ ತಿನ್ನಿಸುವುದು ಹಾಗೂ ಸೇವೆ ಮಾಡುವುದ್ರಿಂದ ಅವ್ರ ಪೀಳಿಗೆ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಮಕ್ಕಳು, ಮೊಮ್ಮಕ್ಕಳ ಉನ್ನತಿಯಾಗುತ್ತದೆ.

ನೀವು ಹಸುವಿಗೆ ಆಹಾರ ನೀಡುತ್ತಿದ್ದರೆ ಮನೆಯಲ್ಲಿರುವ ಮಕ್ಕಳು, ಮೊಮ್ಮಕ್ಕಳಿಗೆ ಸದ್ಗುಣ ಪ್ರಾಪ್ತಿಯಾಗುತ್ತದೆ.

ಹಸು ಕುಳಿತಿದ್ದಾಗ ಆಹಾರ ನೀಡುವುದು ಹೆಚ್ಚು ಶುಭಕರ.

ಹಸುವಿನ ಆಹಾರದ ಜೊತೆ ಬೆಲ್ಲ ಸೇರಿಸಿ ನೀಡಿದ್ರೆ ದೃಶ್ಯ ಹಾಗೂ ಅದೃಶ್ಯ ಶಕ್ತಿಗಳು ನಮಗೆ ಸಹಾಯ ಮಾಡುತ್ತವೆ. ಲೌಕಿಕ ಹಾಗೂ ಅಲೌಕಿಕ ಸುಖ ಪ್ರಾಪ್ತಿಯಾಗುತ್ತದೆ.

ಮಂಗಳವಾರ ಅಪರಿಚಿತ ಹಸುವಿಗೆ ಆಹಾರ ನೀಡುವುದ್ರಿಂದ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಉಪವಾಸವಿದ್ದು ವೃತ ಬಿಡುವ ವೇಳೆಗೆ ಹಸುವಿಗೆ ಆಹಾರ ನೀಡಿದ್ರೆ ನಿಮ್ಮ ವೃತ ಫಲಪ್ರದವಾಗುತ್ತದೆ.

ದೇವಸ್ಥಾನಗಳಲ್ಲಿ ಪೂಜೆ, ಪಾಠ ಮುಗಿದ ಮೇಲೆ ಹಸುವಿಗೆ ಆಹಾರ ನೀಡಬೇಕು. ವಿಧಿ-ವಿಧಾನದ ಮೂಲಕ ಗೋಮಾತೆ ಪೂಜೆ ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read