‘ಹಸಿದ ನರಿಯಂತಾದ ಕಾಂಗ್ರೆಸ್ ಗೆ ಈಗ ಅಧಿಕಾರ ಎಂಬ ಭರ್ಜರಿ ಕೂಳು ಸಿಕ್ಕಿದೆ’: ಬಿಜೆಪಿ ವಾಗ್ಧಾಳಿ

ಬೆಂಗಳೂರು: ಹಸಿದ ನರಿಯಂತಾದ ಕಾಂಗ್ರೆಸ್ ಗೆ ಈಗ ಅಧಿಕಾರ ಎಂಬ ಭರ್ಜರಿ ಕೂಳು ಸಿಕ್ಕಿದೆ ಎಂದು ಬಿಜೆಪಿ
(BJP) ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.

ಕಾಂಗ್ರೆಸ್ ಪಕ್ಷ (Congress party)ಹಸಿದ ನರಿಯಂತಾಗಿತ್ತು, ಈಗ ಅಧಿಕಾರ ಎಂಬ ಭರ್ಜರಿ ಕೂಳು ಸಿಕ್ಕಿದೆ. ಇನ್ನು ರಾಜ್ಯವನ್ನು ಲೂಟಿ ಹೊಡೆಯಲು ಸಂಚು ಹಾಕದೆ ಬಿಟ್ಟೀತೇ ಈ ಎಟಿಎಂ ಸರ್ಕಾರ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ಕಾರಿ ಶಾಲೆಗಳಲ್ಲೂ (Even in government schools) ಲಂಚಾವತಾರ ತಾಂಡವವಾಡುತ್ತಿದೆ. ರಾಜೀವ್ ಗಾಂಧಿ ಕಾಂಗ್ರೆಸ್ ಸರ್ಕಾರದ 85% ಲಂಚಾವತಾರವನ್ನು ಈ ಹಿಂದೆಯೇ ಒಪ್ಪಿಕೊಂಡಿದ್ದನ್ನು ಕಾಂಗ್ರೆಸ್ ಈಗ ನಿಜ ಮಾಡುತ್ತಿದೆ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

ನಂಜನಗೂಡು ಚಾಕು ಇರಿತ ಗಲಾಟೆ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನೈತಿಕ ಪೊಲೀಸ್‌ ಗಿರಿ ಎಂದು ಪುಂಖಾನುಪುಂಖವಾಗಿ ಬಣ್ಣ ಬಳಿದು, ಕಥೆ ಕಟ್ಟಿ ವಿವರಿಸುವ ಕಾಂಗ್ರೆಸ್ಸಿನವರಿಗೆ ಭಾರತ ಮಾತೆಗೆ ಜೈಕಾರ ಹಾಕಿದರು ಎಂಬ ಕಾರಣಕ್ಕಾಗಿ ಹಲ್ಲೆ ಮಾಡಿದವರು ಕಣ್ಣಿಗೆ ಕಾಣುವುದಿಲ್ಲವೇಕೆ ? ಇದು ಯಾವ ಪೊಲೀಸ್‌ ಗಿರಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಅವರೇ ಭಾರತ ಮಾತೆಗೆ ಜಯಘೋಷ ಹಾಕಿದಕ್ಕಾಗಿ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧ (Unforgivable crime) ಭಯೋತ್ಪಾದಕ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುವುದೇ ಇಂತಹ ಘಟನೆಗಳು ನಡೆಯಲು ಕಾರಣ! ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read