ಹರೆಯದ ಮಕ್ಕಳು ಪೋಷಕರ ಮಾತನ್ನು ಅಲಕ್ಷ್ಯ ಮಾಡುವುದೇಕೆ….?

ಬಾಲ್ಯದಲ್ಲಿ ಮಕ್ಕಳಿಗೆ ತಂದೆ ತಾಯಂದಿರೇ ಪ್ರಪಂಚ. ಅಮ್ಮನ ಮಡಿಲು, ಅಪ್ಪನ ಹೆಗಲು ಮಕ್ಕಳ ಪಾಲಿಗೆ ಸ್ವರ್ಗ ಸಮಾನ. ತನ್ನ ಅಮ್ಮ ಜಗತ್ತಿನಲ್ಲಿ ಎಲ್ಲರಿಗಿಂತ ಒಳ್ಳೆಯವಳು, ತನ್ನ ಅಪ್ಪ ಎಲ್ಲರಿಗಿಂತ ಶಕ್ತಿಶಾಲಿ, ಬುದ್ದಿವಂತ ಎಂದೆಲ್ಲಾ ನಂಬಿ ಬೆಳೆಯುವ ಮಕ್ಕಳು ಮುಂದೆ ಸಾಗುತ್ತಾ ಹರೆಯಕ್ಕೆ ಬರುವಷ್ಟರಲ್ಲಿ ಪೋಷಕರ ಮಾತು ಅದೇಕೋ ರುಚಿಸುವುದಿಲ್ಲ.

ಈ ಅಸಡ್ಡೆ ಯಾಕೆ ? ನಮ್ಮಿಂದ ಯಾವ ತಪ್ಪಾಗಿದೆ ? ನಮ್ಮ ಸರ್ವಸ್ವವೂ ಮಕ್ಕಳಿಗೆ ಧಾರೆ ಎರೆದರೂ ಹೀಗೇಕೆ ಆಯ್ತು ಅಂತ ಚಿಂತೆ ಮಾಡುವ ಅಪ್ಪಾ ಅಮ್ಮಂದಿರೆ ಹೆಚ್ಚು.

ಏಳೆಂಟು ವರ್ಷಗಳವರೆಗೂ ಮುಗ್ಧರಾಗಿರುವ ಮಕ್ಕಳು, ಯಾವತ್ತಿಗೂ ಹಾಗೆ ಇರುತ್ತಾರೆ ಎಂದು ಅಂದುಕೊಳ್ಳುವುದು ಮೊದಲ ತಪ್ಪು. ಮಕ್ಕಳು ಬೆಳೆದ ಹಾಗೆ ಅವರ ಆಸಕ್ತಿ ಹಾಗೂ ಅಭಿರುಚಿ ಬದಲಾಗುತ್ತಾ ಹೋಗುತ್ತದೆ. ಅವರ ತಿಳುವಳಿಕೆ ವಿಸ್ತಾರವಾಗುತ್ತಾ ಹೋಗುತ್ತದೆ. ಈ ಹಂತದಲ್ಲಿ ಮಕ್ಕಳ ಅಭಿರುಚಿಯನ್ನು ಪೋಷಕರು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡಬೇಕು.

ಆಧುನಿಕ ಕಾಲಕ್ಕೆ ಪೋಷಕರು ಅಪ್ಡೇಟ್ ಆಗದೆ ಹೋದರೆ ಮಕ್ಕಳ ದೃಷ್ಟಿಯಲ್ಲಿ ಪೋಷಕರು ಹಿಂದೆ ಉಳಿದುಬಿಡುತ್ತಾರೆ. ಮಕ್ಕಳಿಗೆ ಸದಾ ತಮ್ಮ ಕಾಲದ ಕಷ್ಟ – ನಷ್ಟಗಳ, ಕೊರತೆ – ಸಮಸ್ಯೆಗಳ ಕಥೆಯನ್ನೇ ಹೇಳಿ ಹೇಳಿ ರೋಸದೆ, ಆಧುನಿಕ ಕಾಲದ ಚಾಲೆಂಜ್ ಗಳಿಗೆ ತಯಾರು ಮಾಡಿದರೆ ಅವರಿಗೂ ಖುಷಿ ಆಗುತ್ತದೆ. ಇದರಿಂದ ಮಕ್ಕಳು ಪೋಷಕರನ್ನು ಸ್ನೇಹಿತರ ಹಾಗೆ ನೋಡಬಹುದು. ಮಕ್ಕಳ ಅಭಿರುಚಿಯನ್ನು ಅವರ ಭವಿಷ್ಯದ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ಬದಲಾಗಿ ಹೀಯಾಳಿಸಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read