ಹಣವಂತ ಹುಡುಗರಿಗೆ ಹುಡುಗಿಯರು ಆಕರ್ಷಿತರಾಗೋದು ಯಾಕೆ ಗೊತ್ತಾ….?

ಮದುವೆ ಎರಡು ಜೀವಗಳ ಜೊತೆಗೆ ಎರಡು ಕುಟುಂಬಗಳನ್ನು ಬೆಸೆಯುವ ಬಂಧ. ಪ್ರತಿಯೊಬ್ಬ ಹುಡುಗಿಗೂ ಮದುವೆ ಒಂದು ಮಹತ್ವದ ಘಟ್ಟ. ತನ್ನ ರಾಜಕುಮಾರನ ಬಗ್ಗೆ ಹುಡುಗಿ ಕನಸು ಹೆಣೆಯುತ್ತಾಳೆ. ಮದುವೆಯಾಗುವ ಹುಡುಗ ಹೇಗಿರಬೇಕೆನ್ನುವ ಬಗ್ಗೆ ಆಕೆ ಪಟ್ಟಿ ಮಾಡಿರುತ್ತಾಳೆ.

ಸಾಮಾನ್ಯವಾಗಿ ಮದುವೆಯಾಗುವ ಹುಡುಗ ಗುಣವಂತನ ಜೊತೆಗೆ ಹಣವಂತನಾ ಎಂಬುದನ್ನು ಮೊದಲು ನೋಡ್ತಾರೆ ಕೆಲ ಹುಡುಗಿಯರು. ಹಣವಂತನನ್ನು ಮದುವೆಯಾಗುವ ಹುಡುಗಿ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ. ನೆಟ್ಟಗೆ ಸಂಸಾರ ನಡೆಸುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದೇನೇ ಇರಲಿ, ಶ್ರೀಮಂತ ಹುಡುಗನನ್ನು ಮದುವೆಯಾಗಲು ಹುಡುಗಿಗೆ ಅವಳದೇ ಆದ ಕೆಲ ಕಾರಣಗಳಿವೆ.

ಅನೇಕ ಬಾರಿ ಹುಡುಗಿಯರು ತಮ್ಮ ಕೆಟ್ಟ ಆರ್ಥಿಕ ಪರಿಸ್ಥಿತಿಯಿಂದ ಹೊರಬರಲು ಶ್ರೀಮಂತ ಹುಡುಗರಿಗೆ ಆಕರ್ಷಿತರಾಗ್ತಾರೆ.

ಇನ್ನು ಕೆಲ ಹುಡುಗಿಯರು ತಮ್ಮ ಸ್ನೇಹಿತರಿಗಿಂತ ತಾನು ಶ್ರೀಮಂತೆ ಎಂಬುದನ್ನು ತೋರಿಸಿಕೊಳ್ಳಲು ಹಣವಂತ ಹುಡುಗರ ಕೈ ಹಿಡಿಯುತ್ತಾರೆ. ಜನರ ವಿಶ್ವಾಸ ಗಳಿಸುವುದು, ಸ್ಟೇಟಸ್ ತೋರಿಸುವುದು ಅವರ ಉದ್ದೇಶವಾಗಿರುತ್ತದೆ.

ಯಾವುದೇ ಕಷ್ಟಗಳಿಲ್ಲದೆ ಆರಾಮವಾಗಿ ಜೀವನ ಸಾಗಿಸಲು ಇಷ್ಟಪಡುವ ಹುಡುಗಿಯರ ಆಯ್ಕೆ ಕೂಡ ಹಣವಂತ ಹುಡುಗನಾಗಿರುತ್ತಾನೆ.

ಕೆಲ ಹುಡುಗಿಯರು ತಮ್ಮ ದೊಡ್ಡ ದೊಡ್ಡ ಆಸೆಗಳನ್ನು ಈಡೇರಿಸಿಕೊಳ್ಳಲು ಶ್ರೀಮಂತ ಹುಡುಗನನ್ನು ಮದುವೆಯಾಗ್ತಾರೆ.

ದುಃಖ ಹಾಗೂ ಬಡತನದಲ್ಲಿಯೇ ಬೆಳೆದ ಹುಡುಗಿಯರು ಮುಂದಿನ ದಿನಗಳನ್ನಾದ್ರೂ ಆರಾಮವಾಗಿ ಕಳೆಯಬೇಕೆನ್ನುವ ಉದ್ದೇಶದಿಂದ ಹಣವಂತ ಹುಡುಗನ ಹುಡುಕಾಟ ನಡೆಸುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read