ಕಾರಣವಿಲ್ಲದೇ ಶುರುವಾಗುವ ʼಸೈಕ್ಲಿಕ್ ವಾಮಿಟಿಂಗ್ʼ ಸಿಂಡ್ರೋಮ್ ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ಸೈಕ್ಲಿಕ್ ವಾಮಿಟಿಂಗ್ ಸಿಂಡ್ರೋಮ್ ಒಂದು ಅಸಾಮಾನ್ಯ ಕಾಯಿಲೆಯಾಗಿದೆ. ಇದು ಯಾವುದೇ ಸ್ಪಷ್ಟ ಕಾರಣವಿಲ್ಲದೇ ಶುರುವಾಗುತ್ತದೆ. ಹಾಗೇ ಇದು ಗಂಟೆಗಳು ಅಥವಾ ದಿನಗಳವರೆಗೆ ಕಾಡುತ್ತಿರುತ್ತದೆ. ತೀವ್ರ ತಲೆನೋವು ಇದ್ದಾಗ, ಹೆಚ್ಚು ಶಬ್ಧ ಕೇಳಿದಾಗ, ತೀವ್ರವಾದ ಬೆಳಕನ್ನು ಕಂಡಾಗ ಈ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಇಲ್ಲಿದೆ ಟಿಪ್ಸ್.

ಒತ್ತಡವನ್ನು ತಪ್ಪಿಸಿ. ಇದು ವಾಂತಿಯಾಗಲು ಪ್ರಚೋದಿಸುತ್ತದೆ. ಒತ್ತಡವನ್ನು ನಿವಾರಿಸಲು ಯೋಗ ಅಥವಾ ವ್ಯಾಯಾಮವನ್ನು ಅಭ್ಯಾಸ ಮಾಡುವುದು ಒಳ್ಳೆಯದು.

ದ್ರವದ ಪಾನೀಯಗಳನ್ನು ಹೆಚ್ಚು ಸೇವಿಸಿ. ಇದರಿಂದ ವಾಂತಿಯಿಂದಾದ ಸುಸ್ತು ಕಡಿಮೆಯಾಗಿ ಮತ್ತೆ ವಾಂತಿಯಾಗುವುದನ್ನು ತಡೆಯಬಹುದು.

ಈ ಸಮಸ್ಯೆಯಿಂದ ಬಳಲುತ್ತಿರುವವರು ಹಾಲು, ಚೀಸ್, ಚಾಕೋಲೇಟ್ ಮತ್ತು ಮಾಂಸದ ಉತ್ಪನ್ನಗಳಾದ ಚಿಪ್ಪು, ಮೀನು ಮುಂತಾದ ಆಹಾರವನ್ನು ಸೇವಿಸಿ. ಮಸಾಲೆಯುಕ್ತ ಆಹಾರ, ಸಿಗರೇಟ್, ಆಲ್ಕೋಹಾಲ್ ನಿಂದ ದೂರವಿರಿ. ತೆಂಗಿನ ನೀರಿನ ಸೇವನೆಯನ್ನು ಹೆಚ್ಚಿಸಿ.

ಈ ಸಮಸ್ಯೆ ನಿವಾರಿಸಲು ಹೆಚ್ಚು ನಿದ್ರಿಸಬೇಕು. ಹಾಗೇ ವಿಶ್ರಾಂತಿ ಪಡೆಯಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read