ಸೂರ್ಯ ಹಾಗೂ ಮಂಗಳ ದೋಷ ನಿವಾರಣೆಗೆ ತಾಮ್ರದ ಉಂಗುರ ಧರಿಸಿ ಶೀಘ್ರವೇ ʼಫಲಿತಾಂಶʼ ನೋಡಿ

ಪ್ರತಿಯೊಂದು ಲೋಹವೂ ತನ್ನದೆ ವಿಶೇಷತೆ ಹೊಂದಿದೆ. ಗ್ರಹ ದೋಷದ ಜೊತೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಗುಣಪಡಿಸುವ ಗುಣ ಲೋಹಗಳಲ್ಲಿದೆ. ಚಮತ್ಕಾರಿ ಲೋಹದಲ್ಲಿ ತಾಮ್ರ ಕೂಡ ಒಂದು. ತಾಮ್ರದ ಉಂಗುರ ಧರಿಸುವುದ್ರಿಂದ ಸೂರ್ಯ ಮತ್ತು ಮಂಗಳ ಗ್ರಹ ಶಾಂತವಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲೋಹ ಹಾಗೂ ಗ್ರಹಗಳ ನಡುವೆ ಸಂಬಂಧವಿದೆ. ಗ್ರಹ ದೋಷ ಸ್ಥಾನದಲ್ಲಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶುಭ-ಅಶುಭಕ್ಕೆ ಕೂಡ ಈ ಗ್ರಹಗಳು ಕಾರಣ. ತಾಮ್ರದ ಲೋಹವನ್ನು ಶಾಂತವಾದ ಧಾತು ಎಂಬು ಪರಿಗಣಿಸಲಾಗಿದೆ. ಮೇಲೆ ಹೇಳಿದಂತೆ ಸೂರ್ಯ ಹಾಗೂ ಮಂಗಳ ದೋಷವಿದ್ದವರು ತಾಮ್ರದ ಉಂಗುರ ಧರಿಸಬೇಕು. ಶೀಘ್ರದಲ್ಲಿಯೇ ಫಲಿತಾಂಶ ಕಾಣಬಹುದು.

ತಾಮ್ರದ ಉಂಗುರ ಧರಿಸುವುದ್ರಿಂದ ಸಮಾಜದಲ್ಲಿ ಸ್ಥಾನ, ಗೌರವ ಲಭಿಸುತ್ತದೆ. ಮನುಷ್ಯನ ಖ್ಯಾತಿ ಹೆಚ್ಚಾಗುತ್ತದೆ.

ತಾಮ್ರ ಶಾಂತ ಲೋಹವಾಗಿರುವುದ್ರಿಂದ ದೇಹದ ಉಷ್ಣತೆಯನ್ನು ಇದು ಕಡಿಮೆ ಮಾಡುತ್ತದೆ. ಮನಸ್ಸು ಕೂಡ ಶಾಂತವಾಗಿರುತ್ತದೆ. ಹೆಚ್ಚು ಕೋಪಿಷ್ಠರು ತಾಮ್ರದ ಉಂಗುರವನ್ನು ಧರಿಸಬೇಕು. ಮನೆಯಲ್ಲಿ ತಾಮ್ರದ ಪಾತ್ರೆಯಿದ್ದರೆ ಒಳ್ಳೆಯದು. ಮನೆಯಲ್ಲಿ ಶಾಂತಿ ನೆಲೆಸುವ ಜೊತೆಗೆ ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗುತ್ತದೆ.

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದ್ರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ. ಸಂಧಿವಾತ ಸೇರಿದಂತೆ ಅನೇಕ ಸಮಸ್ಯೆಗಳ ಜೊತೆಗೆ ಸಾಂಕ್ರಾಮಿಕ ರೋಗ ಬರದಂತೆ ಕಾಪಾಡುತ್ತದೆ.

ಅತಿಸಾರ, ಕಾಮಾಲೆಯಂತಹ ರೋಗಗಳನ್ನು ಇದು ತಡೆಯುತ್ತದೆ. ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿರುತ್ತದೆ. ದೇಹದ ಉರಿಯೂತವನ್ನೂ ತಾಮ್ರದ ಪಾತ್ರೆಯ ನೀರು ಕಡಿಮೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read