ಸುಖ – ದುಃಖದ ಮುನ್ಸೂಚನೆ ನೀಡುತ್ತೆ ದೇಹದ ಈ ಅಂಗ

ಕಣ್ಣಿನ ರೆಪ್ಪೆ ಬಡಿದುಕೊಳ್ತಿದ್ದಂತೆ ಕೆಲವರು ಆತಂಕಕ್ಕೊಳಗಾಗ್ತಾರೆ. ಮುಂದೇನೋ ಆಗೋದಿದೆ ಎನ್ನುತ್ತಾರೆ. ಆದ್ರೆ ಇಂಟರ್ ನೆಟ್ ಯುಗದಲ್ಲಿ ಇದರ ಬಗ್ಗೆ ಹೇಳಿದ್ರೆ ಅನೇಕರು ನಂಬೋದಿಲ್ಲ. ಇದಕ್ಕೂ ಭವಿಷ್ಯಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ.

ತಲೆತಲಾಂತರದಿಂದ ಮನುಷ್ಯ ಕೆಲವೊಂದು ವಿಷಯಗಳನ್ನು ನಂಬುತ್ತ ಬಂದಿದ್ದಾನೆ. ಕಣ್ಣಿನ ರೆಪ್ಪೆ ಬಡಿದುಕೊಂಡ್ರೆ ಅದಕ್ಕೊಂದು ಅರ್ಥ, ಬೆನ್ನು ಬಡಿದುಕೊಂಡ್ರೆ ಅದಕ್ಕೆ ಇನ್ನೊಂದು ಅರ್ಥ ಹೀಗೆ ನಾನಾ ಭಾಗಗಳು ಬಡಿದುಕೊಂಡ್ರೆ ನಾನಾ ಅರ್ಥಗಳನ್ನು ಹೇಳಿದ್ದಾನೆ.

ತಲೆಯ ಎಡಭಾಗ ಬಡಿದುಕೊಂಡ್ರೆ ಮನುಷ್ಯ ಯಾತ್ರೆ ಮಾಡ್ತಾನೆಂದು ನಂಬಲಾಗಿದೆ. ಬಲಭಾಗ ಬಡಿದುಕೊಂಡ್ರೆ ಧನ ಲಾಭವಾಗುತ್ತದೆಯಂತೆ.

ಎರಡೂ ಕಣ್ಣಿನ ರೆಪ್ಪೆ ಒಟ್ಟಿಗೆ ಬಡಿದುಕೊಂಡ್ರೆ ಹಳೆಯ ಸ್ನೇಹಿತನ ಭೇಟಿಯಾಗುತ್ತದೆ.

ಮೀಸೆಯ ಬಲಭಾಗ  ಬಡಿದುಕೊಂಡ್ರೆ  ಯಶಸ್ಸು ಪ್ರಾಪ್ತಿಯಾಗಲಿದೆ. ಎಡಭಾಗ ಬಡಿದುಕೊಂಡ್ರೆ ಜಗಳವಾಗುವ ಸಾಧ್ಯತೆ ಇದೆ ಎಂದರ್ಥ.

ಗಂಟಲು ಕುಣಿದಂತೆ ಅನುಭವವಾದ್ರೆ ಆಭರಣ ಪ್ರಾಪ್ತಿಯಾಗಲಿದೆ.

ಬೆನ್ನಿನ ಮೇಲ್ಭಾಗ ಬಡಿದುಕೊಂಡ್ರೆ ಧನ ಪ್ರಾಪ್ತಿಯಾಗಲಿದೆ.

ಹೊಟ್ಟೆಯ ಮೇಲ್ಭಾಗ ಬಡಿದುಕೊಂಡ್ರೆ ಆರೋಗ್ಯ ಸಮಸ್ಯೆ ಎದುರಾಗಲಿದೆ. ಕೆಳಗಿನ ಭಾಗ ಬಡಿದುಕೊಂಡ್ರೆ ಒಳ್ಳೆಯದಾಗಲಿದೆ.

ಬಲ ಮೊಣಕಾಲು ಬಡಿದುಕೊಂಡ್ರೆ ಸ್ವರ್ಗ ಪ್ರಾಪ್ತಿಯಾಗಲಿದೆ ಎಂದರ್ಥ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read