ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ….? ಹಾಗಿದ್ರೆ ಇದನ್ನೆಲ್ಲ ಮಿಸ್ ಮಾಡ್ದೇ ತಿನ್ನಿ

ನೀವು ಪಕ್ಕಾ ಸಸ್ಯಹಾರಿನಾ? ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ? ಅದರ ಜೊತೆಜೊತೆಗೆ ಫಿಟ್ & ಫೈನ್ ಆಗಿರಬೇಕು ಅನ್ನೋದು ನಿಮ್ಮ ಆಸೆಯಾಗಿದ್ರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಸ್ನಾಯುಗಳನ್ನು ಗಟ್ಟಿ ಮಾಡುವಂತಹ ಡಯಟ್ ಇದೆ. ಈ ಡಯಟ್ ಪೋಷಕಾಂಶಗಳ ಆಗರ ಮತ್ತು ಇದರಿಂದ ನಿಮ್ಮ ಸ್ನಾಯುಗಳು ಗಟ್ಟಿಮುಟ್ಟಾಗಲಿವೆ. ಆ ತರಕಾರಿಗಳು ಯಾವುವು ಅನ್ನೋದನ್ನ ನೋಡೋಣ.

ಪಾಲಕ್ ಸೊಪ್ಪು : ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದೆ. ಪಾಲಕ್ ಸೊಪ್ಪು ಬ್ಲಡ್ ಕೌಂಟನ್ನು ಸುಧಾರಿಸುತ್ತದೆ. ಒಂದು ಕಪ್ ಪಾಲಕ್ ಸೊಪ್ಪಿನಲ್ಲಿ 30 ಗ್ರಾಂ ಪ್ರೋಟೀನ್ ಇರುತ್ತದೆ. ಇದು ಸಿಕ್ಸ್ ಪ್ಯಾಕ್ ಆಬ್ಸ್ ಮಾಡಲು ನೆರವಾಗುತ್ತದೆ.

ಎಲೆಕೋಸು : ಫೈಬರ್ ಅಂಶ ಹೆಚ್ಚಾಗಿರುವ ಎಲೆಕೋಸು ತೂಕ ಕಡಿಮೆ ಮಾಡಲು ಸಹಾಯಕಾರಿ. ಒಂದು ಕಪ್ ಎಲೆಕೋಸಿನಲ್ಲಿ 70 ಗ್ರಾಂ ಪೋಷಕಾಂಶವಿರುತ್ತದೆ.

ಬ್ರೊಕ್ಲಿ : ಕೆಲವರು ಬ್ರೊಕ್ಲಿ ತಿನ್ನಲು ಇಷ್ಟಪಡುವುದಿಲ್ಲ. ಆದ್ರೆ ಒಂದು ಕಪ್ ಬ್ರೊಕ್ಲಿಯಲ್ಲಿ 91 ಗ್ರಾಂ ಪೋಷಕಾಂಶವಿರುತ್ತದೆ. ಪ್ರತಿದಿನ ಇದನ್ನು ತಿನ್ನುವುದರಿಂದ ಮಸಲ್ಸ್ ಬಿಲ್ಡ್ ಮಾಡಬಹುದು.

ಗೋಬಿ : ಹೂಕೋಸು ಕೂಡ ಪೋಷಕಾಂಶಗಳ ಆಗರ. ಒಂದು ಕಪ್ ಹೂಕೋಸಿನಲ್ಲಿ 100 ಗ್ರಾಂ ಪೋಷಕಾಂಶವಿರುತ್ತದೆ. ಕೇವಲ 25 ಕ್ಯಾಲೋರಿ ಹೊಂದಿರುತ್ತದೆ. ತೂಕ ಕಡಿಮೆ ಮಾಡುವ ಜೊತೆಗೆ ಆಬ್ಸ್ ಬಿಲ್ಡ್ ಮಾಡಲು ಹೂಕೋಸು ಉಪಯುಕ್ತ.

ಅಣಬೆ : ಬಿಳಿಯ ಅಣಬೆಯಲ್ಲಿ ಹೆಚ್ಚು ಪ್ರೋಟೀನ್ ಇರುತ್ತದೆ. ಒಂದು ಕಪ್ ಅಣಬೆಯಲ್ಲಿ 103 ಗ್ರಾಂ ಪೋಷಕಾಂಶವಿರುತ್ತದೆ. ಇದು ಸಿಕ್ಸ್ ಪ್ಯಾಕ್ ಮಾಡಲು ಸಹಕಾರಿಯಾಗಬಲ್ಲ ಉತ್ತಮ ತರಕಾರಿಗಳಲ್ಲೊಂದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read