ಸಾಸಿವೆ ಎಣ್ಣೆಯಿಂದ ವೃದ್ಧಿಯಾಗುತ್ತೆ ʼಆರೋಗ್ಯʼ ಮತ್ತು ʼಸೌಂದರ್ಯʼ

ಸಾಸಿವೆ ಎಣ್ಣೆಯ ರುಚಿ ಕಹಿಯಾಗಿರುತ್ತದೆ. ಅದನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಆದರೆ ಇದರಲ್ಲಿ ಔಷಧೀಯ ಗುಣಗಳಿರುವ ಕಾರಣ ಇದನ್ನು ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಲು ಬಳಸಬಹುದು.

*ಮೃದು ಚರ್ಮವನ್ನು ಪಡೆಯಲು ಸಾಸಿವೆ ಎಣ್ಣೆ ಬಳಸಬಹುದು. ಇದು ಕಪ್ಪು ಕಲೆ, ಸುಕ್ಕುಗಳನ್ನು ನಿವಾರಿಸಿ ತ್ವಚೆಯ ಬಣ್ಣ ಹೊಳೆಯುವಂತೆ ಮಾಡುತ್ತದೆ.

*ಇದನ್ನು ಹಲ್ಲುಗಳ ಹೊಳಪು ಹೆಚ್ಚಿಸಲು ಬಳಸಬಹುದು. ಸಾಸಿವೆ ಎಣ್ಣೆಗೆ ನಿಂಬೆ ರಸ ಮತ್ತು ಉಪ್ಪು ಮಿಕ್ಸ್ ಮಾಡಿ ಹಲ್ಲುಜ್ಜುವುದರಿಂದ ಹೊಳೆಯುವ, ಗಟ್ಟಿಯಾದ ಹಲ್ಲನ್ನು ಪಡೆಯಬಹುದು.

*ಇದು ಶಿಲೀಂದ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇವುಗಳು ಗುಳ್ಳೆಗಳು, ದದ್ದುಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಚರ್ಮ ಆರೋಗ್ಯವಾಗಿರುತ್ತದೆ.

*ಸಾಸಿವೆ ಎಣ್ಣೆ ಕೂದಲಿಗೆ ಬಹಳ ಉತ್ತಮ. ಇದರಿಂದ ತಲೆಕೂದಲನ್ನು ಮಸಾಜ್ ಮಾಡುವುದರಿಂದ ತಲೆಹೊಟ್ಟು, ತುರಿಕೆ, ಕೂದಲುದುರುವ ಸಮಸ್ಯೆ ದೂರವಾಗಿ ಕೂದಲು ಕಪ್ಪಾಗಿ, ದಪ್ಪವಾಗಿ ಬೆಳೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read