ಸಾಕು ನಾಯಿಗೆ ತೋರುವ ಪ್ರೀತಿ – ಇರಲಿ ಈ ರೀತಿ….!

ಸಾಕು ಪ್ರಾಣಿಗಳು ಮನಸ್ಸಿನ ಒತ್ತಡವನ್ನು ಕಳೆದು ಚೇತೋಹಾರಿಯಾಗಿಸುತ್ತದೆ. ಅದಕ್ಕೆ ಅನೇಕ ಜನರು ತಮ್ಮ ಹೆಚ್ಚಿನ ಸಮಯವನ್ನು ಸಾಕು ಪ್ರಾಣಿಗಳ ಜೊತೆ ಕಳೆಯಲು ಇಷ್ಟ ಪಡುತ್ತಾರೆ.

ದಿನದ 6-7 ಗಂಟೆಗಳ ಕಾಲ ಕೆಲಸದ ನಿಮಿತ್ತ ಹೊರಗೆ ಹೋಗಿ ಮನೆಗೆ ವಾಪಸ್ಸಾದ ಕೂಡಲೇ ನಿಮ್ಮ ನೆಚ್ಚಿನ ಸಾಕು ನಾಯಿ ನಿಮ್ಮ ಮೈ ಮೇಲೆ ಎರಗಬಹುದು. ಸಾಕು ನಾಯಿ ಎಷ್ಟೇ ಮುದ್ದಿನ ಪ್ರಾಣಿಯಾದರೂ ಅವುಗಳನ್ನು ಮುದ್ದಿಸುವಾಗ ತುಸು ಎಚ್ಚರಿಕೆ ಅಗತ್ಯ. ತೀರಾ ಅವುಗಳ ನಾಲಿಗೆ ಅಥವಾ ಬಾಯಿಯ ಜೊಲ್ಲು ಇವುಗಳಿಂದ ನಿಮಗೆ ಗಂಭೀರ ರೋಗ ಹರಡಬಹುದು. ಅದಕ್ಕಾಗಿ ನಿಮ್ಮ ಸಾಕು ಪ್ರಾಣಿಗಳಿಗೆ ಕಾಲಕಾಲಕ್ಕೆ ಚುಚ್ಚುಮದ್ದು, ಅಗತ್ಯ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ಅಗತ್ಯ.

ನಿಮ್ಮ ಮಕ್ಕಳ ಕೈ ಕಾಲುಗಳ ಮೇಲೆ ಅಕಸ್ಮಾತ್ ಗಾಯಗಳಾಗಿದ್ದು ಅವುಗಳ ಮೇಲೆ ನಾಯಿ ನೆಕ್ಕಿ ಅಥವಾ ಜೊಲ್ಲು ಸುರಿಸಿದ್ದರೆ ತಕ್ಷಣ ಜಾಗೃತರಾಗಿ. ಸ್ವಚ್ಚ ನೀರಿನಿಂದ ಚೆನ್ನಾಗಿ ಗಾಯ ತೊಳೆದು ನಂತರ ಸೂಕ್ತ ಔಷಧಿ ಹಚ್ಚಿ. ಇಲ್ಲವಾದರೆ ಮಗು ಬಹಳ ಬೇಗ ಗಂಭೀರ ಸಮಸ್ಯೆ ಎದುರಿಸಬಹುದು. ಹಾಗಾಗಿ ಎಷ್ಟೇ ಮುದ್ದಿನ ಪ್ರಾಣಿಯಾದರೂ ಒಂದು ಚಿಕ್ಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read