ಸದಾ ಸ್ಲಿಮ್ ಆಗಿರಲು ಈ ಟಿಪ್ಸ್‌ ಫಾಲೋ ಮಾಡಿ

ನೀವು ಸ್ವಲ್ಪ ತಿಂದರೂ ಬೇಗ ತೂಕ ಗಳಿಸುತ್ತೀರಾ? ಕೆಲವರು ಎಷ್ಟೇ ಪಿಜ್ಜಾ ಬರ್ಗರ್ ತಿಂದರೂ ತೂಕ ಹೆಚ್ಚಿಸಿಕೊಳ್ಳುತ್ತಿಲ್ಲವೇ, ಅದಕ್ಕೇನು ಕಾರಣವಿರಬಹುದು ಎಂಬ ಸಂಶಯ ನಿಮ್ಮನ್ನು ಕಾಡುತ್ತಿದೆಯೇ. ಅವರು ತೆಳ್ಳಗೆ ಬಳುಕುವಾಗ ನಿಮಗೆ ಅಸೂಯೆಯಾಗುತ್ತಿದೆಯೇ.

ದೇಹದಲ್ಲಿ ಉತ್ತಮ ಜೀರ್ಣಕ್ರಿಯೆ ಹೊಂದಿರುವವರು ಏನನ್ನು ತಿಂದರೂ ಕರಗಿಸಿಕೊಳ್ಳುತ್ತಾರೆ. ಅವರ ದೇಹದಲ್ಲಿ ಯಾವುದೂ ಕೊಬ್ಬಾಗಿ ಬದಲಾಗುವುದಿಲ್ಲ. ಹಾಗಾಗಿ ಅವರ ತೂಕವೂ ಹೆಚ್ಚಾಗುವುದಿಲ್ಲ.

ಗಬ ಗಬ ತಿನ್ನುವವರು ಸದಾ ಕೊಬ್ಬು ಹೆಚ್ಚಿಸಿಕೊಳ್ಳುತ್ತಾರೆ. ಚೆನ್ನಾಗಿ ಅಗಿದು ತಿಂದರೆ ದೇಹ ತೂಕ ಹೆಚ್ಚುವುದಿಲ್ಲ. ನೀವು ಸ್ಲಿಮ್, ಫಿಟ್ ಆಗಲು ಬಯಸಿದರೆ ಜಗಿದು ತಿನ್ನಿ. ಇದರಿಂದ ಬಹುಬೇಗ ಹೊಟ್ಟೆ ತುಂಬಿದ ಅನುಭವ ನಿಮ್ಮದಾಗುತ್ತದೆ.

ಉತ್ತಮ ನಿದ್ದೆ ಮಾಡುವುದು ಅವರ ಇನ್ನೊಂದು ಗುಟ್ಟು, ನೀವು ಚೆನ್ನಾಗಿ ನಿದ್ರೆ ಮಾಡಿದರೆ ಮಾತ್ರ ದೇಹ ತೂಕ ಕಡಿಮೆ ಮಾಡಬಹುದು. ಇಲ್ಲವಾದರೆ ಕಾರ್ಬೋಹೈಡ್ರೇಟ್ ಗಳು ಕೊಬ್ಬಾಗಿ ಬದಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read