ಸದಾ ದೇವಾನುದೇವತೆಗಳು ನೆಲೆಸಲು ಕಾರಣವಾಗುತ್ತೆ ಪ್ರತಿ ದಿನದ ಈ ಹವ್ಯಾಸ

ಯಾರ ಮನೆಯಲ್ಲಿ ವಿಧಿ ವಿಧಾನದ ಮೂಲಕ ದೇವರ ಪೂಜೆ ಮಾಡಲಾಗುತ್ತದೆಯೋ ಆ ಮನೆಯಲ್ಲಿ ಸದಾ ದೇವಾನುದೇವತೆಗಳು ನೆಲೆಸಿರುತ್ತವೆ. ದೇವರ ಮನೆಯ ಸಣ್ಣಪುಟ್ಟ ವಿಷಯಗಳೂ ಇಲ್ಲಿ ಮಹತ್ವದ ಸ್ಥಾನ ಪಡೆಯುತ್ತವೆ.

ಈ ಹಿಂದೆಯೇ ದೇವರ ಮನೆಗೆ ಸಂಬಂಧಿಸಿದ ಕೆಲ ವಿಷಯಗಳನ್ನು ಹೇಳಿದ್ದೇವೆ. ದೇವರು, ಪೂಜೆ ವಿಚಾರದಲ್ಲಿ ಯಾರು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುತ್ತಾರೋ ಅವರು ಸುಲಭವಾಗಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಬೆಳಿಗ್ಗೆ ಹಾಗೂ ಸಂಜೆ ಪ್ರತಿದಿನ ಮನೆಯಲ್ಲಿ ದೇವರ ಪೂಜೆ ಮಾಡಬೇಕು. ಇದ್ರಿಂದ ಮನೆಯೊಳಗೆ ಧನಾತ್ಮಕ ಶಕ್ತಿ ಪ್ರವೇಶವಾಗುತ್ತದೆ.

ಯಾರ ಮನೆಯಲ್ಲಿ ತೆಂಗಿನ ಕಾಯಿಯನ್ನು ಪೂಜಿಸಲಾಗುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಹಣ-ಆಹಾರಕ್ಕೆ ಈ ಮನೆಯಲ್ಲಿ ಯಾವುದೇ ಕೊರತೆ ಕಾಣಿಸುವುದಿಲ್ಲ.

ಗೊಬ್ಬರದಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂಬ ನಂಬಿಕೆ ಇದೆ. ಗೋ ನೀಡುವ ಸಗಣಿ ಪವಿತ್ರವಾದದ್ದು. ಯಾರ ಮನೆಯಲ್ಲಿ ಸಗಣಿಯಿಂದ ಭೂಮಿಯನ್ನು ಸ್ವಚ್ಛಗೊಳಿಸಲಾಗುತ್ತದೆಯೋ, ಎಲ್ಲಿ ಸಗಣಿ ಹಾಕಿ ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆಯೋ ಅಲ್ಲಿ ಲಕ್ಷ್ಮಿ ನೆಲೆ ನಿಲ್ಲುತ್ತಾಳೆ.

ಪೂರ್ವ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವುದು ಶ್ರೇಷ್ಠ. ದಕ್ಷಿಣ ದಿಕ್ಕಿಗೆ ದೇವರ ಮನೆಯ ಬಾಗಿಲಿರಬೇಕು. ಪ್ರವೇಶ ದ್ವಾರದ ಎದುರಿಗೆ ದೇವರ ಮುಖ ಬರದಂತೆ ನೋಡಿಕೊಳ್ಳಿ.

ದೇವರ ಕೋಣೆ ನಿರ್ಮಾಣ ಮಾಡುವಾಗ ಸೂರ್ಯನ ಬೆಳಕು ಹಾಗೂ ಗಾಳಿ ಸರಿಯಾಗಿ ಬರುವಂತೆ ನೋಡಿಕೊಳ್ಳಿ.

ಬೆಳಿಗ್ಗೆ ಹಾಗೂ ಸಂಜೆ ಪೂಜೆ ಮಾಡುವ ವೇಳೆ ಗಂಟೆ ಬಾರಿಸಿ. ಇದ್ರಿಂದ ನಕಾರಾತ್ಮಕ ಶಕ್ತಿ ಮನೆಯಿಂದ ಹೊರಗೆ ಹೋಗಿ ಧನಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.

ರಾತ್ರಿ ಮಲಗುವಾಗ ದೇವರ ಮನೆ ಬಾಗಿಲು ಮುಚ್ಚಿರಲಿ.

ಮನೆಗೆ ಗೋ ಮೂತ್ರವನ್ನು ಸಿಂಪಡಿಸಿ. ಇದು ದೈವಿ ಶಕ್ತಿಗಳನ್ನು ಆಕರ್ಷಿಸುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read