ಸಂಸದೆ ಸುಮಲತಾರಿಂದ ಬಿಜೆಪಿಗೆ ಬೆಂಬಲ; ರಂಗಮಂದಿರದಲ್ಲಿದ್ದ ಭಾವಚಿತ್ರ ತೆರವುಗೊಳಿಸಿದ ಯುವಕರು….!

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಸುಮಲತಾ ಅಂಬರೀಶ್ ಈಗ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಇವರ ಈ ನಿರ್ಧಾರದಿಂದ ಮನನೊಂದ ಯುವಕರ ಗುಂಪೊಂದು ರಂಗಮಂದಿರದಲ್ಲಿ ಹಾಕಲಾಗಿದ್ದ ಸುಮಲತಾ ಅವರ ಭಾವಚಿತ್ರವನ್ನು ತೆರವುಗೊಳಿಸಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿ ಬಿದರಕರೆ ಗ್ರಾಮದ ಪಿ. ಲಂಕೇಶ್ ರಂಗಮಂದಿರದಲ್ಲಿ ಹಾಕಲಾಗಿದ್ದ ಸುಮಲತಾ ಅಂಬರೀಶ್ ಅವರ ಭಾವಚಿತ್ರವನ್ನು ತೆರವುಗೊಳಿಸಲಾಗಿದ್ದು, ಇದನ್ನು ಅಂಬರೀಶ್ ಅವರು ಸಂಸದರಾಗಿದ್ದ ಸಂದರ್ಭದಲ್ಲಿ ನೀಡಿದ್ದ ಅನುದಾನದಲ್ಲಿ ನಿರ್ಮಿಸಲಾಗಿತ್ತು.

ಲಂಕೇಶ್ ಪತ್ರಿಕೆಯ ಅಂಕಣಕಾರರಾಗಿದ್ದ ಬಿ. ಚಂದ್ರೇಗೌಡ, ಲಂಕೇಶ್ ಅವರ ಮೇಲಿನ ಅಭಿಮಾನದಿಂದಾಗಿ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮದಲ್ಲಿ ಲೋಕಸಭಾ ಸದಸ್ಯರ ಅನುದಾನದಲ್ಲಿ ಲಂಕೇಶ್ ಅವರ ಹೆಸರಿನಲ್ಲಿಯೇ ರಂಗಮಂದಿರ ನಿರ್ಮಾಣ ಮಾಡಲಾಗಿತ್ತು. ಇದನ್ನು ಗೌರಿ ಲಂಕೇಶ್ ಉದ್ಘಾಟಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read