ಸಂಪತ್ತು ವೃದ್ಧಿಸುವ ಮಹತ್ವವಿರುವ ‘ಅಕ್ಷಯ ತೃತೀಯ’

ಅಕ್ಷಯ ತೃತೀಯ ದಿನದಂದು ಏನು ಮಾಡಿದರೂ ಒಳಿತಾಗುತ್ತದೆ. ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ ತೃತೀಯಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ. ಚಿನ್ನವನ್ನು ಮನೆಗೆ ತಂದರೆ ಒಳಿತಾಗುತ್ತದೆ ಎಂಬ ನಂಬಿಕೆ ಬೆಳೆದು ಬಂದಿದೆ.

ಚಿನ್ನ ಖರೀದಿಗೆ ಅಕ್ಷಯ ತೃತೀಯ ದಿನ ಉತ್ತಮ ಎಂದು ಹೇಳುವುದರಿಂದ ಕೆಲವರು, ಮೊದಲೇ ಅಂಗಡಿಗಳಲ್ಲಿ ಚಿನ್ನ ಖರೀದಿಸಿ ಇಟ್ಟಿರುತ್ತಾರೆ. ಅಂದಿನ ದಿನ ಮನೆಗೆ ಕೊಂಡೊಯ್ಯುತ್ತಾರೆ. ಇನ್ನು ಕೆಲವರು ಅಕ್ಷಯ ತೃತೀಯದಂದೇ ಚಿನ್ನ ಖರೀದಿ ಮಾಡುವುದರಿಂದ ಚಿನ್ನದ ಅಂಗಡಿಗಳಲ್ಲಿ ಜನಜಾತ್ರೆಯೇ ನೆರೆದಿರುತ್ತದೆ. ಈ ದಿನದಂದು ಗೃಹಪ್ರವೇಶ, ಪೂಜೆ, ನಾಮಕರಣ, ವ್ಯಾಪಾರ ವಹಿವಾಟು ಮಾಡಿದರೆ ಒಳಿತಾಗುತ್ತದೆ ಎಂದು ಹೇಳಲಾಗುತ್ತದೆ.

ಅಕ್ಷಯ ತೃತೀಯ ದಿನದಂದು ಮಾಡುವ ಕೆಲಸಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಇರುವುದರಿಂದ, ಬಹುತೇಕರು ಈ ದಿನದಂದು ಚಿನ್ನ ಖರೀದಿ ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಾರೆ. ಸಂಪತ್ತು ಹೆಚ್ಚುತ್ತದೆ, ಸುಖ, ಸಂತೋಷ ಲಭಿಸುತ್ತದೆ ಎಂದು ಹೇಳುವುದರಿಂದ ಈ ದಿನಕ್ಕೆ ಭಾರೀ ಮಹತ್ವ ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read