ಶ್ರೀಮಂತರಾಗಲು ಇಲ್ಲಿದೆ ಸುಲಭ ʼಉಪಾಯʼ

ಶ್ರೀಮಂತರಾಗಲು ಯಾರು ಬಯಸುವುದಿಲ್ಲ ಹೇಳಿ. ಇದಕ್ಕಾಗಿ ದಿನಪೂರ್ತಿ ದುಡಿಯುತ್ತಾರೆ. ಆದ್ರೆ ಕೈನಲ್ಲಿ ಹಣ ಮಾತ್ರ ನಿಲ್ಲೋದಿಲ್ಲ. ಅಂತವರು ಪ್ರತಿದಿನ ಈ ಸುಲಭ ಉಪಾಯ ಅನುಸರಿಸಿ ಕೈ ತುಂಬಾ ಹಣ ಮಾಡಬಹುದು.

ಬೆಳಿಗ್ಗೆ ಎದ್ದು ಬ್ರೆಷ್ ಮಾಡಿದ ನಂತ್ರ ಎರಡು ತುಳಸಿ ಎಲೆಯನ್ನು ತಿನ್ನಬೇಕು. ಪ್ರತಿ ಬುಧವಾರ ಗಣೇಶನ ದರ್ಶನ ಮಾಡಿ.

ವೃತ್ತಿಯಲ್ಲಿ ಸುಧಾರಣೆ ಕಾಣಲು ಮಧ್ಯದ ಬೆರಳಿಗೆ ಲೋಹದ ಉಂಗುರವನ್ನು ಧರಿಸಿ. ಪ್ರತಿ ಶನಿವಾರ ಬಡವರಿಗೆ ನಾಣ್ಯವನ್ನು ದಾನದ ರೂಪದಲ್ಲಿ ನೀಡಿ.

ಗುರುವಾರ ಅಪ್ಪಿತಪ್ಪಿಯೂ ಹಸಿರು ಗಿಡವನ್ನು ಕತ್ತರಿಸಬೇಡಿ.

ಸುಖ-ಸಂಪತ್ತಿಗಾಗಿ ಪ್ರತಿ ದಿನ ತುಳಸಿ ಗಿಡದ ಕೆಳಗೆ ತುಪ್ಪದ ದೀಪವನ್ನು ಹಚ್ಚಿ. ರವಿವಾರ ದೀಪವನ್ನು ಹಚ್ಚಬೇಡಿ.

ಹಣದ ಹೊಳೆ ಹರಿಯಬೇಕೆಂದು ಬಯಸುವವರು ಮನೆಯ ಮುಂದೆ ಹೂವಿನ ಗಿಡಗಳನ್ನು ಬೆಳೆಸಿ. ಮಕ್ಕಳಿಗೆ ಆಟದ ಸಾಮಗ್ರಿ ಹಾಗೂ ಚಾಕಲೇಟ್ ನೀಡುತ್ತಿರಿ.

ಮನೆಯ ಮುಖ್ಯ ದ್ವಾರಕ್ಕೆ ಮಾವಿನ ಎಲೆ ತೋರಣವನ್ನು ಹಾಕಿ. ಎಲೆ ಒಣಗಲು ಬಿಡಬೇಡಿ. ಪ್ರತಿ ರವಿವಾರ ಇದನ್ನು ಬದಲಿಸಿ.

ಬಳಸದ ಚಪ್ಪಲಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಪ್ರತಿ ಮಂಗಳವಾರ ರಾತ್ರಿ 11 ಬಾರಿ ಹನುಮಾನ್ ಚಾಲೀಸ್ ಓದಿ.

ಮನೆಯಲ್ಲಿ ಮಾಡಿದ ಆಹಾರದಲ್ಲಿ ಸ್ವಲ್ಪವನ್ನು ಪ್ರಾಣಿಗಳಿಗೆ ನೀಡಿ. ಒಂದೇ ಪಾತ್ರೆಯಲ್ಲಿ ಮಾಂಸಹಾರ ಹಾಗೂ ಸಸ್ಯಹಾರವನ್ನು ಇಡಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read