ಶೌಚಾಲಯ ಸ್ವಚ್ಛಗೊಳಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ….!

ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಭಾನುವಾರ ರಜೆ ದಿನವಾಗಿದ್ದರೂ ಸಹ ತಮ್ಮ ಕಚೇರಿಗೆ ಬಂದು ಶೌಚಾಲಯ ಮತ್ತು ಮೂತ್ರಾಲಯಗಳನ್ನು ಸ್ವಚ್ಛಪಡಿಸಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕುಷ್ಟಗಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಇಂತಹದೊಂದು ಮಾದರಿ ಕಾರ್ಯವನ್ನು ಮಾಡಿದವರಾಗಿದ್ದು, ಇವರ ಈ ಕಾರ್ಯಕ್ಕೆ ಸಿಬ್ಬಂದಿಗಳಾದ ದಾವಲಸಾಬ ವಾಲೀಕರ ಹಾಗೂ ಶರಣಪ್ಪ ತೆಮ್ಮಿನಾಳ ಸಾಥ್ ನೀಡಿದ್ದಾರೆ.

ತಮ್ಮ ಕಚೇರಿಯ ಮೂತ್ರಾಲಯ ಹಾಗೂ ಶೌಚಾಲಯ ದುರ್ನಾತ ಬೀರುತ್ತಿದ್ದ ಕಾರಣ ಅವರು ಈ ಕಾರ್ಯವನ್ನು ಮಾಡಿದ್ದು, ಮತ್ತೊಂದು ಮಹತ್ವದ ಸಂಗತಿ ಎಂದರೆ ಇದರಿಂದ ಪ್ರೇರಣೆಗೊಂಡ ತಾಲೂಕಿನ ಅಡವಿಬಾವಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಜಕುಮಾರ ನಾಯಕ ಕೂಡ ತಮ್ಮ ಶಾಲೆಯ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ಸ್ವತಃ ತಾವೇ ಸ್ವಚ್ಛಗೊಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read