ಶಿವರಾತ್ರಿಯಂದು ಮಾಡುವ ಉಪವಾಸ ವೃತ ಹೀಗಿರಲಿ

ಶಿವರಾತ್ರಿಯಂದು ಅಸಂಖ್ಯಾತ ಭಕ್ತರು ಉಪವಾಸ ವೃತ ಮಾಡ್ತಾರೆ. ಆದ್ರೆ ಎಲ್ಲರಿಂದ್ಲೂ ದಿನಪೂರ್ತಿ ಖಾಲಿ ಹೊಟ್ಟೆಯಲ್ಲಿರೋದು ಅಸಾಧ್ಯ. ಅಂಥವರು ಅನ್ನವನ್ನು ಸೇವಿಸದೆ, ವೃತಕ್ಕೆ ಸೂಕ್ತವಾದ ಕೆಲವು ಆಹಾರವನ್ನು ತೆಗೆದುಕೊಳ್ಳಬಹುದು. ಉಪವಾಸ ವೃತಕ್ಕೆ ಸೂಕ್ತವಾದ ಆಹಾರ ಪದಾರ್ಥಗಳು ಯಾವುವು ಅನ್ನೋದನ್ನು ನೋಡೋಣ.

ಉಪವಾಸ ವೃತ ಕೈಗೊಂಡಾಗ ಹಾಲು ಹಾಗೂ ಹಣ್ಣು ಸೇವನೆ ಸರ್ವೇ ಸಾಮಾನ್ಯ. ಅದರ ಜೊತೆಗೆ ನೀವು ಹಸಿವು ತಣಿಸಲು ಸಾಬೂದಾನ ಜೊತೆಗೆ ಡ್ರೈಪ್ರೂಟ್ಸ್ ಹಾಗೂ ನಟ್ಸ್ ಹಾಕಿ ಪಾಯಸ ಮಾಡಿಕೊಂಡು ಸೇವಿಸಬಹುದು.

ಸಾಬೂದಾನ ಕಿಚಡಿ ಕೂಡ ಉಪವಾಸಕ್ಕೆ ಹೇಳಿ ಮಾಡಿಸಿದಂತಹ ತಿನಿಸು. ಹಾಲು, ಸಕ್ಕರೆ ಮತ್ತು ಗೋಡಂಬಿಯಿಂದ ತಯಾರಿಸುವ ಕಾಜು ಕಟ್ಲಿಯನ್ನು ಕೂಡ ವೃತ ಆಚರಿಸುವವರು ತಿನ್ನಬಹುದು. ಕೆಲವು ಕಡೆಗಳಲ್ಲಿ ಶಿವರಾತ್ರಿಯಂದು ಭಕ್ತರು ಭಾಂಗ್ ಲಸ್ಸಿ ಸೇವಿಸುವ ಸಂಪ್ರದಾಯವಿದೆ. ದಿನಪೂರ್ತಿ ಉಪವಾಸ ಮಾಡುವವರು ಒಂದು ಗ್ಲಾಸ್ ಕುಡಿಯಬಹುದು. ಅದನ್ನು ತಯಾರಿಸುವುದು ಕೂಡ ಸುಲಭ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read