ಶಿವರಾತ್ರಿಗೆ ವಿಶೇಷ ರೆಸಿಪಿ ‘ಗಸಗಸೆ’ ಪಾಯಸ

ಸಾಮಾನ್ಯವಾಗಿ ಹಬ್ಬಕ್ಕೆ ಪಾಯಸ ಮಾಡುವುದು ಸಹಜ. ಆದರೆ ಸ್ಪೆಷಲ್ಲಾಗಿ ಈ ದಿನ ಗಸಗಸೆ ಪಾಯಸ ಮಾಡಿ ನೋಡಿ. ಈ ಪಾಯಸವನ್ನು ವಾರದಲ್ಲಿ ಎರಡು ಮೂರು ಬಾರಿ ತಿಂದರೆ ನಿದ್ದೆ ಸಮಸ್ಯೆ ಕೂಡ ಪರಿಹಾರವಾಗುತ್ತದೆ.

ಬೇಕಾಗುವ ಸಾಮಾಗ್ರಿಗಳು :

ಹಾಲು – ಮುಕ್ಕಾಲು ಲೋಟ
ಬೆಲ್ಲ – ಅರ್ಧ ಕಪ್ ಕುಟ್ಟಿದ್ದು
ತೆಂಗಿನಕಾಯಿ – ಹೆಚ್ಚಿದ್ದು ಸ್ವಲ್ಪ
ಗೋಡಂಬಿ ದ್ರಾಕ್ಷಿ – ಹೆಚ್ಚಿದ್ದು ಸ್ವಲ್ಪ
ಗಸಗಸೆ – 3 ಟೇಬಲ್ ಚಮಚ
ಒಣಗಿದ ಕೊಬ್ಬರಿ – ಹೆಚ್ಚಿದ್ದು ಸ್ವಲ್ಪ
ಅಕ್ಕಿ – ಒಂದು ಚಮಚ
ಗೋಡಂಬಿ, ಬಾದಾಮಿ ನೆನೆಸಿದ್ದು
ಏಲಕ್ಕಿ – 2
ತುಪ್ಪ – 3 ಟೇಬಲ್ ಚಮಚ
ಮಾಡುವ ವಿಧಾನ :

ಫ್ರೈ ಪ್ಯಾನ್ ನಲ್ಲಿ ಅಕ್ಕಿಯನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ನಂತರ ಸ್ವಲ್ಪ ಗಸಗಸೆಯನ್ನು ಹಾಕಿ ಎರಡು ನಿಮಿಷಗಳ ಕಾಲ ಫ್ರೈ ಮಾಡಿ.
ಮಿಕ್ಸಿ ಜಾರಿಗೆ ತೆಂಗಿನ ಕಾಯಿ, ಒಣ ಕೊಬ್ಬರಿ, ನೆನೆಸಿದ ಗೋಡಂಬಿ, ಬಾದಾಮಿ, ಏಲಕ್ಕಿ, ಹುರಿದ ಅಕ್ಕಿ ಮತ್ತು ಗಸಗಸೆ ಎಲ್ಲವನ್ನೂ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಅರ್ಧ ಲೋಟ ಹಾಲು ಹಾಕಿ ಚೆನ್ನಾಗಿ ನುಣ್ಣನೆ ರುಬ್ಬಿಕೊಳ್ಳಿ.

ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಅದನ್ನು ನೀರಿನಲ್ಲಿ ಕರಗಿಸಿ. ಚೆನ್ನಾಗಿ ಕರಗಿದ ಬೆಲ್ಲದ ನೀರನ್ನು ಸೋಸಿಕೊಳ್ಳಿ. ಆ ಬೆಲ್ಲದ ನೀರಿಗೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ ಗಟ್ಟಿ ಆಗುವವರೆಗೆ ಕುದಿಯಲು ಬಿಡಿ. ನಂತರ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿಯನ್ನು ಹುರಿದು ಮಿಶ್ರಣಕ್ಕೆ ಸೇರಿಸಿ. ಈಗ ವಿಶೇಷವಾದ ಬಿಸಿ ಬಿಸಿ ಗಸಗಸೆ ಪಾಯಸ ಸವಿಯಲು ಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read