ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುವುದರಲ್ಲಿ ಯಾವುದೇ ಅನುಮಾನವಿಲ್ಲ; ಶಾಸಕ ಅಶೋಕ್‌ ನಾಯ್ಕ್

ಶಿವಮೊಗ್ಗ: ಕಾರ್ಯಕರ್ತರ ಹುಮ್ಮಸ್ಸು, ಹುರುಪು ನೋಡುತ್ತಿದ್ದರೆ ಗ್ರಾಮಾಂತರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಗ್ರಾಮಾಂತರ ಕ್ಷೇತ್ರ ಶಾಸಕ ಕೆ ಬಿ ಅಶೋಕ್ ನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಗ್ರಾಮಾಂತರ ಕ್ಷೇತ್ರದ ಚುನಾವಣಾ ಕಚೇರಿ ಉದ್ಘಾಟನೆ ಆಗಿದೆ. ಕಮಲ ಅರಳುವುದು ನಿಶ್ಚಿತ, ಶುಭ ಸೂಚನೆ ಕಾಣಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಸಣ್ಣಪುಟ್ಟ ಆಸೆ ಆಮಿಷ ತೋರಿಸುವುದಿದೆ. ಬಿಜೆಪಿ ಕಾರ್ಯಕರ್ತರಿಗೆ ಯಾರು ಕೂಡಾ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಕಾರ್ಯಕರ್ತರು ಕಟಿಬದ್ದರಾಗಿ ನಿಂತಿದ್ದಾರೆ ಎಂದರು.

ಕನಿಷ್ಠ 30 ಸಾವಿರಕ್ಕೂ ಹೆಚ್ಚು ಮತಗಳಿಂದ ಈ ಬಾರಿ‌ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲ್ಲಿದೆ. ಈ ಮಾತನ್ನು ಕಾರ್ಯಕರ್ತರು, ಮತದಾರರು ಹೇಳ್ತಿದ್ದಾರೆ. ಕಾರ್ಯಕರ್ತರೇ ದೊಡ್ಡ ಶಕ್ತಿ, ಅವರ ತೀರ್ಮಾನವೇ ಅಂತಿಮ ಎಂದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ಪಟ್ಟಿ ಬಿಡುಗಡೆ ವಿಷಯ ನಮ್ಮ ಗಮನಕ್ಕೂ ಬಂದಿದೆ. ನಮ್ಮ ಹಿರಿಯರೆಲ್ಲಾ ಸೇರಿ ಸಭೆ ನಡೆಸಿದ್ದಾರೆ. ಇವತ್ತು ಒಂದೆರಡು ಗಂಟೆಯೊಳಗೆ ಪಟ್ಟಿ ಬಿಡುಗಡೆ ಆಗಲಿದೆ. ಶಿವಮೊಗ್ಗ ಜಿಲ್ಲೆಯ ಬಹುತೇಕ ಹಾಲಿ ಶಾಸಕರಿಗೆ ಟಿಕೇಟ್ ಸಿಗುವ ವಿಶ್ವಾಸ ಇದೆ ಎಂದರು.

ಪಕ್ಷ ಏನು ನಿರ್ಧಾರ ಕೈಗೊಳ್ಳುತ್ತದೋ, ಆ ನಿರ್ಧಾರಕ್ಕೆ ನಾವು ಬದ್ದ. ಹಾಲಿ ಶಾಸಕ ಇದ್ದೀನಿ, ಪಕ್ಷಕ್ಕೆ ಮನವಿ ಮಾಡಿಕೊಂಡಿದ್ದೇನೆ. ಮತ್ತೊಮ್ಮೆ ಅವಕಾಶ ಕೊಡುವಂತೆ ಮನವಿ ಮಾಡಿದ್ದೇನೆ. ಕಾರ್ಯಕರ್ತರ ಅಪೇಕ್ಷೆ ಇದೆ. ಶಿವಮೊಗ್ಗ ಗ್ರಾಮಾಂತರ ಜಯಭೇರಿ ಆಗಬೇಕು ಎಂಬ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ನಡೆ ಪ್ರತಿಕ್ರಿಯೆ ನೀಡಿದ ಅವರು, ಆಯನೂರು ಮಂಜುನಾಥ್ ಅವರಿಂದ ಪಕ್ಷಕ್ಕೆ ಹಿನ್ನಡೆ ಆಗಿದೆ ಅಂತಾ ಅನಿಸುತ್ತಿಲ್ಲ. ಇನ್ನು ಕಾದು ನೋಡಬೇಕಾಗಿದೆ. ಮಂಜಣ್ಣ ನಮ್ಮ ನಾಯಕರು, ನಮ್ಮನ್ನು ಬಿಟ್ಟು ಹೋಗಲ್ಲ ಎಂಬ ವಿಶ್ವಾಸ ಇದೆ. ಪಕ್ಷದೊಳಗೆ ಆಂತರಿಕ ಸಣ್ಣಪುಟ್ಟ ವಿಷಯ ಇರುತ್ತದೆ. ಆ ಸಮಸ್ಯೆಯನ್ನು ಪಕ್ಷದ ಹಿರಿಯರು‌ ಬಗೆಹರಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read