ಶಾಸ್ತ್ರದ ಪ್ರಕಾರ ಶಿವರಾತ್ರಿಯಂದು ರಾಶಿಗನುಗುಣವಾಗಿ ಹೀಗೆ ಮಾಡಿ ʼಶಿವಾರಾಧನೆʼ

ಅನಂತನಾಗಿರುವುದ್ರಿಂದ ಶಿವನ ಆರಾಧನೆ ಎಷ್ಟು ಮಾಡಿದ್ರೂ ಅದು ಕಡಿಮೆಯೇ. ಶಿವನಿಂದಲೇ ಎಲ್ಲವೂ ಶುರುವಾಗುತ್ತದೆ. ಶಿವನಿಂದಲೇ ಅಂತ್ಯವಾಗುತ್ತದೆ. ಆದ್ರೆ ಶಿವನಿಗೆ ಮಾತ್ರ ಆದಿ-ಅಂತ್ಯವಿಲ್ಲ. ವಿಧಿ-ವಿಧಾನದ ಮೂಲಕ ಶಿವನ ಆರಾಧನೆ ಮಾಡಿದ್ರೆ ಶಿವರಾತ್ರಿಯಂದು ಶಿವನನ್ನು ಒಲಿಸಿಕೊಳ್ಳಲು ಸಾಧ್ಯ. ಶಾಸ್ತ್ರದ ಪ್ರಕಾರ ರಾಶಿಗನುಗುಣವಾಗಿ ಶಿವನ ಆರಾಧನೆ ಮಾಡಬೇಕು.

ಮೇಷ : ಮೇಷ ರಾಶಿಯವರು ಶಿವನಿಗೆ ಹೂವನ್ನು ಅರ್ಪಿಸಿ ಪೂಜೆ ಮಾಡಬೇಕು. ಈ ರಾಶಿಯವರು ಶಿವರಾತ್ರಿಯಂದು ಜಲಕ್ಕೆ ಬೆಲ್ಲವನ್ನು ಸೇರಿಸಿ ಶಿವನಿಗೆ ಅಭಿಷೇಕ ಮಾಡಬೇಕು.ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು.

ವೃಷಭ : ಈ ರಾಶಿಯವರು ಮಹಾ ಶಿವರಾತ್ರಿಯಂದು ಮೊಸರು ಮತ್ತು ಜಲವನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಿ ಶಿವ ಸ್ತುತಿಯನ್ನು ಜಪಿಸಬೇಕು.

ಮಿಥುನ : ಮಿಥುನ ರಾಶಿಯವರು ಕಬ್ಬಿನ ಹಾಲನ್ನು ಶಿವನಿಗೆ ಅಭಿಷೇಕ ಮಾಡಬೇಕು. ಬಿಲ್ವ ಪತ್ರೆಯನ್ನು ಅರ್ಪಿಸಿ ಸುಖ-ಶಾಂತಿಗೆ ಪ್ರಾರ್ಥನೆ ಮಾಡಬೇಕು.

ಕರ್ಕ : ಹಾಲು ಮಿಶ್ರಿತ ನೀರನ್ನು ಶಿವನಿಗೆ ಅರ್ಪಿಸಬೇಕು. ಇದ್ರಿಂದ ಎಲ್ಲ ಬಯಕೆ ಈಡೇರುತ್ತದೆ.

ಸಿಂಹ : ಕೆಂಪು ಚಂದನದ ಜೊತೆ ನೀರನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ಜೊತೆಗೆ ಕಬ್ಬಿನ ಹಾಲನ್ನು ಶಿವನಿಗೆ ಅರ್ಪಿಸುವುದು ಶುಭಕರ.

ಕನ್ಯಾ : ಈ ರಾಶಿಯವರು ಬಾಂಗ್ ಹಾಗೂ ಉಮ್ಮತ್ತಿ ಹೂವನ್ನು ಅರ್ಪಿಸಬೇಕು. ಒತ್ತಡ ಕಡಿಮೆಯಾಗಿ ಜೀವನದಲ್ಲಿ ಸುಖ ಪ್ರಾಪ್ತಿಯಾಗುತ್ತದೆ.

ತುಲಾ : ಈ ರಾಶಿಯವರು ಆಕಳ ತುಪ್ಪ ಹಾಗೂ ಸುಗಂಧಿತ ಜಲದಿಂದ ಶಿವನ ಪೂಜೆ ಮಾಡಬೇಕು. ಕೇಸರಿಯುಕ್ತ ಸಿಹಿಯನ್ನು ಶಿವನಿಗೆ ನೀಡಬೇಕು.

ವೃಶ್ಚಿಕ : ಶಿವನ ಕೃಪೆಗೆ ಪಾತ್ರರಾಗ ಬಯಸುವವರು ಜೇನು ತುಪ್ಪದ ಜೊತೆ ನೀರು ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ಜೇನುತುಪ್ಪವಿಲ್ಲದ ಸಂದರ್ಭದಲ್ಲಿ ಸಕ್ಕರೆಯನ್ನು ಬಳಸಬಹುದು.

ಧನು : ತುಪ್ಪದ ದೀಪ ಹಚ್ಚಿ, ಶಿವನಿಗೆ ಪೂಜೆ ಮಾಡಬೇಕು. ಪಂಚಾಕ್ಷರಿ ಮಂತ್ರವನ್ನು ಪಠಿಣಸಬೇಕು.

ಮಕರ : ಎಳ್ಳು ಹಾಗೂ ಜಲವನ್ನು ಶಿವನಿಗೆ ಅರ್ಪಿಸಬೇಕು. ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿ ಪೂಜೆ ಮಾಡಬೇಕು.

ಕುಂಭ : ತೆಂಗಿನ ಕಾಯಿಯ ನೀರನ್ನು ಶಿವನಿಗೆ ಅರ್ಪಿಸಿ ಪೂಜೆ ಮಾಡಬೇಕು.

ಮೀನ : ಮೀನ ರಾಶಿಯವರು ಶಿವನಿಗೆ ಚಂದನವನ್ನು ಅರ್ಪಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read