ಶನಿವಾರ ಇದನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ

ಶನಿವಾರ ವಿಶೇಷವಾಗಿದ್ದು. ಶನಿ ಭಕ್ತರು ಶನಿವಾರ ವಿಶೇಷ ವೃತ, ಪೂಜೆಗಳನ್ನು ಮಾಡ್ತಾರೆ. ಶನಿವಾರ, ಶನಿ ಪೂಜೆ, ಹನುಮಂತನ ಪೂಜೆ ಜೊತೆ ಕೆಲವೊಂದು ವಿಷ್ಯಗಳ ಬಗ್ಗೆ ಗಮನವಿಡಬೇಕಾಗುತ್ತದೆ. ಶನಿದೇವನ ಕೃಪೆಗೆ ಪಾತ್ರರಾಗಬಯಸುವವರು ಶನಿವಾರ ಈ ಪದಾರ್ಥಗಳನ್ನು ಸೇವನೆ ಮಾಡಬಾರದು.

ಶನಿವಾರ ಮೊಸರು ಹಾಗೂ ಹಾಲಿನಿಂದ ದೂರವಿರಬೇಕು. ಬರಿ ಮೊಸರು ಮತ್ತು ಹಾಲಿನ ಸೇವನೆ ಮಾಡಬಾರದು. ಅನಿವಾರ್ಯವಾದ್ರೆ ಚಿಟಕಿ ಅರಿಶಿನ ಅಥವಾ ಬೆಲ್ಲವನ್ನು ಹಾಕಿ ಸೇವನೆ ಮಾಡಬೇಕು.

ಶನಿವಾರ ಉಪ್ಪಿನ ಕಾಯಿಯನ್ನು ತಿನ್ನಬಾರದು. ಮಾವಿನ ಕಾಯಿ ಉಪ್ಪಿನಕಾಯಿ ಸೇವನೆ ಮಾಡಿದ್ರೆ ಶನಿದೇವ ಕೋಪಗೊಳ್ತಾನೆ.

ಶನಿ ದೇವರಿಗೆ ಕೆಂಪು ಮೆಣಸು ಪ್ರಿಯವಲ್ಲ. ಹಾಗಾಗಿ ಶನಿವಾರ ಕೆಂಪು ಮೆಣಸಿನ ಸೇವನೆ ಮಾಡಬಾರದು. ಶನಿವಾರ ಹಸಿರು ಅಥವಾ ಕಾಳು ಮೆಣಸಿನ ಸೇವನೆ ಮಾಡಬಹುದು.

ಶನಿವಾರ ಮದ್ಯಪಾನದಿಂದ ದೂರವಿರಬೇಕು. ಶನಿವಾರ ಮದ್ಯಪಾನ ಮಾಡಿದ್ರೆ ಶನಿ ಕೋಪಗೊಳ್ತಾನೆ. ಶನಿ ದೋಷಗಳನ್ನು ಎದುರಿಸಬೇಕಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read