ವಿಷ್ಣುವಿನ ಹಲವು ಅವತಾರಗಳಲ್ಲಿ ಕೃಷ್ಣನ ಅವತಾರವು ಒಂದು. ಕೃಷ್ಣನಿಗೆ ಅವಲಕ್ಕಿ ಅಂದರೆ ಬಲು ಇಷ್ಟ. ಈ ಏಕಾದಶಿಯಂದು ವಿಶೇಷ ರೀತಿಯಲ್ಲಿ ಅವಲಕ್ಕಿ ಉಪ್ಪಿಟ್ಟು ಮಾಡಿ ನೋಡಿ.
ಅವಲಕ್ಕಿ ಉಪ್ಪಿಟ್ಟಿಗೆ ಬೇಕಾಗುವ ಪದಾರ್ಥಗಳು
ಅವಲಕ್ಕಿ – 1 ಕಪ್
ತುರಿದ ಸೌತೆಕಾಯಿ – 1/2 ಕಪ್
ತುರಿದ ಕ್ಯಾರೆಟ್ – 1/2 ಕಪ್
ಕಾಯಿ ತುರಿ – 1 ಕಪ್
ಕಡಲೆ ಬೀಜ – ಸ್ವಲ್ಪ
ಹಸಿಮೆಣಸಿನ ಕಾಯಿ – 4-5
ಉದ್ದಿನ ಬೇಳೆ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಎಣ್ಣೆ, ಸಾಸಿವೆ ಮತ್ತು ಕರಿಬೇವು
ತಯಾರಿಸುವ ವಿಧಾನ
ಅವಲಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಹಿಂಡಿ ಅದಕ್ಕೆ ಸೌತೆಕಾಯಿ ತುರಿಯನ್ನು ಸೇರಿಸಿ ನೆನೆಯಲು ಬಿಡಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಒಗ್ಗರಣೆ ಹಾಕಿ ಕಡಲೆಬೀಜ ಸೇರಿಸಿ ಕೆಂಪಗಾಗುವವರೆಗೂ ಹುರಿಯಿರಿ. ಇದಕ್ಕೆ ಹಸಿಮೆಣಸಿನ ಕಾಯಿ, ಕ್ಯಾರೆಟ್ ತುರಿ ಹಾಕಿ ಫ್ರೈ ಮಾಡಿ. ನೆನೆಸಿರುವ ಅವಲಕ್ಕಿಯನ್ನು ಈ ಒಗ್ಗರಣೆಗೆ ಸೇರಿಸಿ ಕೊನೆಯಲ್ಲಿ ಕಾಯಿತುರಿ, ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕೂಡಿಸಿದರೆ ರುಚಿಕರವಾದ ಅವಲಕ್ಕಿ ಉಪ್ಪಿಟ್ಟು ರೆಡಿ.