ವೇದಿಕೆ ಮೇಲೆ ಕುಣಿಯುತ್ತಲೇ ಕುಸಿದು ಬಿದ್ದ ವ್ಯಕ್ತಿ, ಕ್ಯಾಮರಾದಲ್ಲಿ ಸೆರೆಯಾಗಿದೆ ಹಠಾತ್‌ ಸಾವಿನ ದೃಶ್ಯ…..!

ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯ ಡೊಂಗರ್‌ಗಢ ಎಂಬಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮದುವೆ ಸಮಾರಂಭದಲ್ಲಿ ಖುಷಿಯಿಂದ ನರ್ತಿಸುತ್ತಿದ್ದ ವ್ಯಕ್ತಿ ವೇದಿಕೆಯ ಮೇಲೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಡಾನ್ಸ್‌ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಮೃತ ವ್ಯಕ್ತಿ ಭಿಲಾಯ್ ಸ್ಟೀಲ್ ಪ್ಲಾಂಟ್‌ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಈತನನ್ನು ಬಲೋದ್ ಜಿಲ್ಲೆಯ ನಿವಾಸಿ ದಿಲೀಪ್ ರೌಜ್ಕರ್ ಎಂದು ಗುರುತಿಸಲಾಗಿದೆ. ಮೇ 4 ಮತ್ತು 5ರಂದು ದಿಲೀಪ್‌ ಸಂಬಂಧಿಕರ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಮಧ್ಯರಾತ್ರಿ ವೇಳೆಗೆ ಎಲ್ಲರೂ ಮದುವೆ ಮನೆಯಲ್ಲಿ ಡಾನ್ಸ್‌ ಮಾಡುತ್ತಿದ್ದರು. ಈ ವೇಳೆ ದಿಲೀಪ್‌ ಕೂಡ ಸಖತ್ತಾಗಿ ಕುಣಿದಿದ್ದಾನೆ.

ಸ್ವಲ್ಪ ರೆಸ್ಟ್‌ ಮಾಡೋಣ ಎಂದುಕೊಂಡು ಕುಳಿತ ದಿಲೀಪ್‌ ಅಲ್ಲೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾನೆ.  ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಖುಷಿಯಿಂದ ಕುಣಿಯುತ್ತಿದ್ದ ದಿಲೀಪ್‌, ಡಾನ್ಸ್‌ ನಿಲ್ಲಿಸಿ ವೇದಿಕೆಯ ಮೇಲೆಯೇ ಕುಳಿತಿದ್ದ. ಅದಾದ ಕೆಲವೇ ಕ್ಷಣಗಳಲ್ಲಿ ಆತ ಸಾವನ್ನಪ್ಪಿದ್ದಾನೆ.

https://twitter.com/AnandPanna1/status/1656367461607047168?ref_src=twsrc%5Etfw%7Ctwcamp%5Etweetembed%7Ctwterm%5E1656374271915233280%7Ctwgr%5E5a045a00fbf7e3d1cbf34c6e58eb4174918cb896%7Ctwcon%5Es2_&ref_url=https%3A%2F%2Fwww.news18.com%2Findia%2Fcaught-on-cam-man-dies-of-heart-attack-while-dancing-on-stage-at-wedding-in-chhattisgarh-7779541.html

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read