‘ವಿಶ್ವ ಚಾಕಲೇಟ್‌ ದಿನ’ ದಂದು ಬಹಿರಂಗವಾಗಿದೆ ಇಂಥಾ ಅಚ್ಚರಿಯ ಸಂಗತಿ…!

ಚಾಕಲೇಟ್‌ ಅನ್ನು ಇಷ್ಟಪಡದೇ ಇರುವವರೇ ಎಲ್ಲ. ಪ್ರಪಂಚದಾದ್ಯಂತ ಜನರು ಚಾಕಲೇಟ್‌ ತಿನ್ನುತ್ತಾರೆ. ಆದ್ರೆ ಅತಿ ಹೆಚ್ಚು ಚಾಕಲೇಟ್‌ ಪ್ರಿಯರು ಇರುವ ದೇಶ ಯಾವುದು ಗೊತ್ತಾ? ಅಲ್ಲಿ ಪ್ರತಿ ವ್ಯಕ್ತಿ ಎಷ್ಟೆಷ್ಟು ಚಾಕಲೇಟ್‌ ತಿನ್ನುತ್ತಾರೆ ಅನ್ನೋ ಲೆಕ್ಕ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ವರದಿಯ ಪ್ರಕಾರ, ಸ್ವಿಡ್ಜರ್ಲೆಂಡ್‌  ಜನರು ವಿಶ್ವದಲ್ಲೇ ಅತಿ ಹೆಚ್ಚು ಚಾಕೊಲೇಟ್ ತಿನ್ನುತ್ತಾರೆ. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಒಂದು ವರ್ಷದಲ್ಲಿ ಸುಮಾರು 8.8 ಕೆಜಿ ಚಾಕೊಲೇಟ್ ತಿನ್ನುತ್ತಾನೆ. ಇಲ್ಲಿನ ಜನರಿಗೆ ಚಾಕಲೇಟ್ ಹುಚ್ಚು ಎಷ್ಟರ ಮಟ್ಟಿಗೆ ಇದೆ ಅನ್ನೋದನ್ನು ನೀವೇ ಯೋಚಿಸಿ. ಇಡೀ ಪ್ರಪಂಚದಲ್ಲಿ ಸ್ವಿಡ್ಜರ್ಲೆಂಡ್ ಚಾಕೊಲೇಟ್‌ಗೆ ಹೆಚ್ಚು ಜನಪ್ರಿಯವಾಗಲು ಇದೇ ಕಾರಣ. ಅಲ್ಲಿನ ಚಾಕೊಲೇಟ್ ಕಂಪನಿಯಾದ ಟೊಬ್ಲರ್ನೊ ವಿಶ್ವದ ಅತ್ಯುತ್ತಮ ಚಾಕೊಲೇಟ್ ಕಂಪನಿಗಳಲ್ಲಿ ಒಂದಾಗಿದೆ.

ವಿಶ್ವದಲ್ಲೇ ಅತಿ ಹೆಚ್ಚು ಚಾಕೊಲೇಟ್ ತಿನ್ನುವವರ ಪಟ್ಟಿಯಲ್ಲಿ ಆಸ್ಟ್ರಿಯಾ ಎರಡನೇ ಸ್ಥಾನದಲ್ಲಿದೆ. ಆಸ್ಟ್ರಿಯಾದಲ್ಲಿ ಪ್ರತಿ ವ್ಯಕ್ತಿ ವರ್ಷಕ್ಕೆ 8 ಕೆಜಿ ಚಾಕೊಲೇಟ್ ತಿನ್ನುತ್ತಾನೆ. ಅಚ್ಚರಿಯ ವಿಷಯವೆಂದರೆ ವಿಶ್ವದ ಎರಡು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳು ಅಂದರೆ ಚೀನಾ ಮತ್ತು ಭಾರತ ಈ ಪಟ್ಟಿಯಲ್ಲಿ ಮುಂದಿಲ್ಲ. ಅಮೆರಿಕದಲ್ಲೂ ಚಾಕಲೇಟ್‌ ಪ್ರಿಯರು ಹೆಚ್ಚಿದ್ದಾರೆ. ಇಲ್ಲಿ ಪ್ರತಿಯೊಬ್ಬರೂ ವರ್ಷಕ್ಕೆ ಸರಾಸರಿ 4.5 ಕೆಜಿ ಚಾಕೊಲೇಟ್ ತಿನ್ನುತ್ತಾರೆ.

ಭಾರತೀಯರು ಎಷ್ಟು ಚಾಕೊಲೇಟ್ ತಿನ್ನುತ್ತಾರೆ?

ಭಾರತದಲ್ಲಿ ಚಾಕೊಲೇಟ್ ತಿನ್ನುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಇಲ್ಲಿ ಪ್ರತಿ ವರ್ಷ ಒಬ್ಬ ವ್ಯಕ್ತಿಯು ಸರಾಸರಿ 140 ಗ್ರಾಂ ಚಾಕೊಲೇಟ್ ಅನ್ನು ಮಾತ್ರ ತಿನ್ನುತ್ತಾನೆ. ವಾಸ್ತವವಾಗಿ ಇದರ ಹಿಂದೆ ಹಲವು ಕಾರಣಗಳಿವೆ. ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿ ತಲಾ ಆದಾಯ ಕಡಿಮೆ ಇರುವುದರಿಂದ ದುಬಾರಿ ಬೆಲೆಯ ಚಾಕಲೇಟ್ ತಿನ್ನಲು ಹೆಚ್ಚು ಹಣ ವ್ಯಯಿಸುವುದು ಸೂಕ್ತ ಎಂದು ಇಲ್ಲಿನ ಜನರು ಭಾವಿಸುವುದಿಲ್ಲ. ಮತ್ತೊಂದೆಡೆ ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚು. ಹಾಗಾಗಿ ಜನರು ಚಾಕಲೇಟ್‌ನಿಂದ ದೂರವಿರುತ್ತಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read