ವಿಶ್ವದ ಅತ್ಯಂತ ದುಬಾರಿ ವಾಟರ್‌ ಬಾಟಲ್‌ ಇದು, ಬೆಲೆ ಮರ್ಸಿಡಿಸ್‌ ಕಾರಿಗಿಂತಲೂ ಅಧಿಕ….!

ಶಾಲಾ-ಕಾಲೇಜು, ಕಚೇರಿ, ಶಾಪಿಂಗ್‌ ಹೀಗೆ ಹೊರಗೆ ಹೋಗುವಾಗ ಪ್ರತಿಯೊಬ್ಬರೂ ಸಾಮಾನ್ಯವಾಗಿ ನೀರಿನ ಬಾಟಲಿಯನ್ನು ಜೊತೆಗೆ ಕೊಂಡೊಯ್ಯುತ್ತಾರೆ. ಗಾಜು, ತಾಮ್ರ, ಸ್ಟೀಲ್, ಪ್ಲಾಸ್ಟಿಕ್ ಸೇರಿದಂತೆ ನಾನಾ ಬಗೆಯ ನೀರಿನ ಬಾಟಲಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳ ಬೆಲೆ 100 ರೂಪಾಯಿಯಿಂದ 1000 ರೂಪಾಯಿವರೆಗೂ ಇರಬಹುದು. ಆದರೆ ಇಲ್ಲೊಂದು ಅಪರೂಪದ ವಾಟರ್‌ ಬಾಟಲ್‌ ಇದೆ. ಇದರ ಬೆಲೆ ಸಾವಿರವಲ್ಲ, ಲಕ್ಷಗಳಲ್ಲಿದೆ.

ಈ ನೀರಿನ ಬಾಟಲಿಯ ಹೆಸರು ಗಿನ್ನೆಸ್ ಪುಸ್ತಕದಲ್ಲಿಯೂ ದಾಖಲಾಗಿದೆ. ಇಷ್ಟೊಂದು ದುಬಾರಿಯಾಗಿರೋ ನೀರಿನ ಬಾಟಲಿಯಲ್ಲಿ ಅಂಥದ್ದೇನಿದೆ ವಿಶೇಷ ಅನ್ನೋದೇ ಇಂಟ್ರೆಸ್ಟಿಂಗ್‌ ಸಂಗತಿ.  ಈ ಬಾಟಲಿಯ ಹೆಸರು ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬ್ಯೂಟೊ ಇ ಮೊಡಿಗ್ಲಿಯಾನೊ. 2010ರಲ್ಲಿ ಅದರ ಹೆಸರನ್ನು ಗಿನ್ನೆಸ್ ಪುಸ್ತಕದಲ್ಲಿ ನೋಂದಾಯಿಸಲಾಗಿದೆ. ಕಳೆದ 13 ವರ್ಷಗಳಿಂದ ಇದು ಅತ್ಯಂತ ಫ್ಯಾಶನೇಬಲ್‌ ಮತ್ತು ದುಬಾರಿ ಬಾಟಲ್ ಎಂದು ಕರೆಯಲ್ಪಟ್ಟಿದೆ.

ನೀರಿನ ಬಾಟಲಿ ಇಷ್ಟು ದುಬಾರಿಯಾಗಲು ಕಾರಣವೇನು ?

ಈ ನೀರಿನ ಬಾಟಲಿಯ ಬೆಲೆ 50 ಲಕ್ಷ ರೂಪಾಯಿ. ಇದು 750 ಮಿಲಿ ನೀರನ್ನು ತುಂಬಬಲ್ಲ ಸಾಮರ್ಥ್ಯ ಹೊಂದಿದೆ. ಇದರ ವಿನ್ಯಾಸ ಮತ್ತು ಪ್ಯಾಕಿಂಗ್ ತುಂಬಾ ವಿಶೇಷವಾಗಿದೆ. ಈ ಬಾಟಲಿಯು ಭೂಮಿಯ ಮೇಲಿನ ಶುದ್ಧ ನೀರನ್ನು ಹೊಂದಿದೆಯಂತೆ. ಇದರಲ್ಲಿರುವುದು ಫ್ರಾನ್ಸ್, ಫಿಜಿ ಮತ್ತು ಐಸ್‌ಲ್ಯಾಂಡ್‌ನ ಹಿಮನದಿಗಳಿಂದ ತಂದ ನೀರು. ವಿಶೇಷ ಅಂದ್ರೆ ಬಾಟಲಿಯನ್ನು 24 ಕ್ಯಾರೆಟ್ ಶುದ್ಧ ಚಿನ್ನದಿಂದ ತಯಾರಿಸಲಾಗಿದೆ. ಈ ಬಾಟಲಿ ನೀರಿನಲ್ಲಿ 5 ಗ್ರಾಂ ಚಿನ್ನ ಕೂಡ ಪತ್ತೆಯಾಗಿದೆ.

ಪ್ರಪಂಚದಾದ್ಯಂತ ವಿಶಿಷ್ಟ ವಿನ್ಯಾಸಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಕಲಾವಿದ ಫೆರ್ನಾಂಡೋ ಅಲ್ಟಾಮಿರಾನೊ ಈ ನೀರಿನ ಬಾಟಲಿಯನ್ನು ಡಿಸೈನ್‌ ಮಾಡಿದ್ದಾರೆ. ಅದ್ಭುತ ವಿನ್ಯಾಸದಿಂದಾಗಿ 2010ರಲ್ಲಿ ನಡೆದ ಹರಾಜಿನಲ್ಲಿ ಈ ಬಾಟಲ್ 60 ಸಾವಿರ ಡಾಲರ್ ಅಂದರೆ 48.60 ಲಕ್ಷ ರೂಪಾಯಿಗೆ ಬಿಕರಿಯಾಗಿತ್ತು. ಚಿನ್ನದ ಹೊರತಾಗಿ ಈ ಬಾಟಲಿಯಲ್ಲಿ ಉತ್ತಮ ಗುಣಮಟ್ಟದ ವಜ್ರಗಳು ಮತ್ತು ಪ್ಲಾಟಿನಂ ಕೂಡ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read