ವಿಶ್ವದ ಅತ್ಯಂತ ದುಬಾರಿ ರೆಸಾರ್ಟ್‌ ಇದು….! ಒಂದು ರಾತ್ರಿ ಕಳೆಯಲು ವೆಚ್ಚ ಮಾಡಬೇಕು 81 ಲಕ್ಷ ರೂಪಾಯಿ

ವಿಶ್ವದ ಅತ್ಯಂತ ದುಬಾರಿ ರೆಸಾರ್ಟ್ ಯಾವುದು ಗೊತ್ತಾ ? ಇಲ್ಲಿ ಒಂದು ರಾತ್ರಿ ವಾಸ್ತವ್ಯಕ್ಕೆ ಎಷ್ಟು ವೆಚ್ಚವಾಗುತ್ತೆ ಅನ್ನೋದು ತಿಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ. ಈ ಅಲ್ಟ್ರಾ ಐಷಾರಾಮಿ ರೆಸಾರ್ಟ್ ದುಬೈನಲ್ಲಿದೆ. ಅಟ್ಲಾಂಟಿಸ್ ರಾಯಲ್ ಹೋಟೆಲ್‌ ಇದು.

ಗ್ರ್ಯಾಮಿ ಪ್ರಶಸ್ತಿ ಗೆದ್ದಿರೋ ಅಮೆರಿಕದ ಪಾಪ್ ಗಾಯಕಿ ಬೆಯಾನ್ಸ್, ಇತ್ತೀಚೆಗೆ ಈ ರೆಸಾರ್ಟ್ ಅನ್ನು ಉದ್ಘಾಟಿಸಿದ್ದಾರೆ. ಈ ಶೋಗಾಗಿ ಬೆಯಾನ್ಸ್‌ 24 ಮಿಲಿಯನ್ ಡಾಲರ್‌ ಅಂದರೆ ಸುಮಾರು 194 ಕೋಟಿ ರೂಪಾಯಿ ಪಡೆದಿದ್ದಾರಂತೆ.

ವಿಶ್ವದ ಅತ್ಯಂತ ದುಬಾರಿ ರೆಸಾರ್ಟ್ ಎಂದು ಬಣ್ಣಿಸಲಾಗಿರುವ ಇದೇ ಹೋಟೆಲ್‌ನಲ್ಲಿಯೇ ಬೆಯಾನ್ಸ್‌ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಾಗಿತ್ತು. ದುಬೈನಲ್ಲಿ ಬುರ್ಜ್‌ ಖಲೀಫಾ ಸಿಕ್ಕಾಪಟ್ಟೆ ಫೇಮಸ್‌ ಆಗಿತ್ತು. ಆದ್ರೀಗ ಅಟ್ಲಾಂಟಿಸ್‌ ರಾಯಲ್‌ ಹೋಟೆಲ್‌ ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು ಒಬ್ಬರಿಗೆ ಒಂದು ಲಕ್ಷ ಡಾಲರ್ ಅಂದರೆ ಸುಮಾರು 81 ಲಕ್ಷ ರೂಪಾಯಿ ಖರ್ಚಾಗುತ್ತದೆ. ಈ ಹಣದಲ್ಲಿ ಭಾರತದಲ್ಲಿ ಮನೆ, ಫ್ಲಾಟ್, ಕಾರು ಇತ್ಯಾದಿಗಳನ್ನು ಸುಲಭವಾಗಿ ಖರೀದಿಸಬಹುದು. ಅಟ್ಲಾಂಟಿಸ್ ರಾಯಲ್ ಹೋಟೆಲ್‌ನಲ್ಲಿ ಕೊಠಡಿಗಳ ಬುಕಿಂಗ್ ಫೆಬ್ರವರಿ ತಿಂಗಳಿನಿಂದ ಪ್ರಾರಂಭವಾಗಲಿದೆ. ಇಲ್ಲಿ 4 ಮಲಗುವ ಕೋಣೆ ಸೌಲಭ್ಯಗಳಿವೆ.

ಇದರೊಂದಿಗೆ ಖಾಸಗಿ ಟೆರೇಸ್, ಸಮುದ್ರ ವೀಕ್ಷಣೆಗೆ ಸ್ಥಳ, ಸ್ವಿಮ್ಮಿಂಗ್‌ ಪೂಲ್‌ ಎಲ್ಲವೂ ಇವೆ. 100 ವರ್ಷ ಹಳೆಯ ಮರಗಳು ಕೂಡ ಗಮನ ಸೆಳೆಯುತ್ತವೆ. ಹೋಟೆಲ್‌ನಲ್ಲಿ ಒಟ್ಟು ಎರಡು ಮಹಡಿಗಳಿವೆ. ಒಟ್ಟಾರೆ 18 ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಖಾಸಗಿ ಸಭಾಂಗಣದ ಸೌಲಭ್ಯವೂ ಇದೆ. ಇಲ್ಲಿಂದ ಅರಬ್ಬಿ ಸಮುದ್ರ ಮತ್ತು ಪಾಮ್ ದ್ವೀಪದ ಸುಂದರ ನೋಟಗಳನ್ನು ಆನಂದಿಸಬಹುದು. ಅಟ್ಲಾಂಟಿಸ್ ರಾಯಲ್ ಹೋಟೆಲ್ ಒಟ್ಟಾರೆ 43 ಮಹಡಿಗಳನ್ನು ಹೊಂದಿದೆ. ಹೋಟೆಲ್‌ನಾದ್ಯಂತ 90 ಈಜುಕೊಳಗಳನ್ನು ನಿರ್ಮಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read