ವಿವಸ್ತ್ರನಾಗಿ ಮೊಬೈಲ್ ಟವರ್ ಏರಿ ಕುಳಿತ ಭೂಪ; ಮದ್ಯ ನೀಡುವ ಆಮಿಷದ ಬಳಿಕ ಕೆಳಗಿಳಿದ….!

ಕಂಠಮಟ್ಟ ಕುಡಿದಿದ್ದ ಯುವಕನೊಬ್ಬ ಅಮಲಿನಲ್ಲಿ ವಿವಸ್ತ್ರನಾಗಿ ಮೊಬೈಲ್ ಟವರ್ ಏರಿ ಕುಳಿತಿದ್ದು, ಜಪ್ಪಯ್ಯ ಅಂದರೂ ಕೆಳಗಿಳಿದು ಬಂದಿರಲಿಲ್ಲ. ಯಾವಾಗ ಮತ್ತಷ್ಟು ಮದ್ಯ ಹಾಗೂ ಗುಟ್ಕಾ ನೀಡುವುದಾಗಿ ಜನ ಆಮಿಷ ಒಡ್ಡಿದರೋ ಆ ಬಳಿಕ ಇಳಿದು ಬಂದಿದ್ದಾನೆ.

ಇಂತಹದೊಂದು ಘಟನೆ ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಬಳಗನೂರು ಗ್ರಾಮದಲ್ಲಿ ಶನಿವಾರ ನಡೆದಿದ್ದು, ತೆಗ್ಗಿಹಳ್ಳಿಯ 25 ವರ್ಷದ ಸತೀಶ ಕಡಣಿ ಎಂಬಾತ ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಕುಳಿತುಕೊಂಡಿದ್ದ.

ಅಷ್ಟೇ ಅಲ್ಲ, ಈತ ಮೈ ಮೇಲಿನ ಬಟ್ಟೆ ಬಿಚ್ಚಿದ್ದು, ಯುವಕನ ಹುಚ್ಚಾಟ ನೋಡಿದ ಗ್ರಾಮಸ್ಥರು ಕೆಳಗಿಳಿದು ಬರುವಂತೆ ಕೂಗಿದ್ದಾರೆ. ಯಾವುದೇ ಪ್ರಯೋಜನವಾಗದಿದ್ದಾಗ ಪೊಲೀಸರು ಹಾಗೂ ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದು, ಅವರು ಬಂದರೂ ಸಹ ಆತ ಇಳಿದು ಬಂದಿಲ್ಲ. ಕೊನೆಗೆ ಎಲ್ಲರೂ ಸೇರಿ ಕೆಳಗಿಳಿದು ಬಂದರೆ ನಿನಗೆ ಮತ್ತಷ್ಟು ಮದ್ಯ ಕುಡಿಸುವುದರ ಜೊತೆಗೆ ಗುಟ್ಕಾ ನೀಡುತ್ತೇವೆ ಎಂದಾಗ ಭೂಪ ಇಳಿದು ಬಂದಿದ್ದಾನೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read