ವಿದ್ಯಾರ್ಥಿನಿಯ ಪ್ರಾಣಕ್ಕೇ ಕುತ್ತು ತಂದ ಇಯರ್‌ ಫೋನ್‌….!

ನಾಗ್ಪುರದಲ್ಲಿ ಇಯರ್‌ ಫೋನ್‌, 19 ವರ್ಷದ ಯುವತಿಯ ಸಾವಿಗೆ ಕಾರಣವಾಗಿದೆ. ಇಯರ್‌ ಫೋನ್‌ ಹಾಕಿಕೊಂಡು ರೈಲ್ವೆ ಹಳಿ ದಾಟುತ್ತಿದ್ದ  ಯುವತಿಗೆ ರೈಲು ಡಿಕ್ಕಿಯಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಾಗ್ಪುರ ಜಿಲ್ಲೆಯ ಗುಮ್‌ಗಾಂವ್ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

ಆರತಿ ಮದನ್‌ ಗುರವ್‌ ಎಂಬ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಮೃತ ದುರ್ದೈವಿ. ಮೂಲತಃ ಭಂಡಾರಾ ಜಿಲ್ಲೆಯ ಸಟೋನಾ ಗ್ರಾಮದ ಈಕೆ ನಾಗ್ಪುರದ ಡೊಂಗರ್‌ಗಾಂವ್‌ನಲ್ಲಿರುವ ವೈಂಗಂಗಾ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಳು.

ತಮ್ಮ ಸಂಬಂಧಿಕರೊಂದಿಗೆ ತಕಲಾಘಾಟ್ ಗ್ರಾಮದಿಂದ ಗುಮ್‌ಗಾಂವ್‌ಗೆ ಬೆಳಗ್ಗೆ ಆರತಿ ಬಸ್‌ನಲ್ಲಿ ಆಗಮಿಸಿದ್ದಾಳೆ. ಇಯರ್‌ ಫೋನ್‌ ಹಾಕಿಕೊಂಡು ಹಳಿ ದಾಟುತ್ತಿದ್ದಾಗ ವೇಗವಾಗಿ ಅದೇ ಮಾರ್ಗದಲ್ಲಿ ರೈಲು ಬಂದಿದೆ. ಇದನ್ನು ಗಮನಿಸಿದ ಸಿಬ್ಬಂದಿ ಅಲಾರಾಂ ಕೂಡ ಮೊಳಗಿಸಿದ್ರು. ಆದ್ರೆ ಇಯರ್‌ ಫೋನ್‌ ಸೌಂಡ್‌ ಜೋರಾಗಿದ್ದಿದ್ದರಿಂದ ಆಕೆಗೆ ರೈಲು ಬಂದಿದ್ದು ಅರಿವಿಗೇ ಬರಲಿಲ್ಲ. ಆರತಿ ಹಳಿ ದಾಟುವಷ್ಟರಲ್ಲಿ ರೈಲು ಆಕೆಗೆ ಡಿಕ್ಕಿ ಹೊಡೆದಿದೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read