ವಿದ್ಯಾರ್ಥಿನಿಗೆ ನಡು ರಸ್ತೆಯಲ್ಲಿ ತಾಳಿ ಕಟ್ಟಿದ ವಿಡಿಯೋ ವೈರಲ್…! ಇಲ್ಲಿದೆ ಇದರ ಹಿಂದಿನ ಸತ್ಯಾಸತ್ಯತೆ

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವಿಡಿಯೋ ಒಂದು ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಇದರಲ್ಲಿ ಯುವಕನೊಬ್ಬ ವಿದ್ಯಾರ್ಥಿನಿಗೆ ನಡುರಸ್ತೆಯಲ್ಲೇ ತಾಳಿ ಕಟ್ಟಿದ್ದಾನೆ.

ಇದು ಮಂಡ್ಯದ ರೋಟರಿ ಭವನದ ಮುಂದೆ ನಡೆದಿರುವ ಘಟನೆ ಎಂದು ಹೇಳಿ ವಿಡಿಯೋ ಶೇರ್‌ ಮಾಡಲಾಗುತ್ತಿದ್ದು, ನಡು ರಸ್ತೆಯಲ್ಲೇ ವಿದ್ಯಾರ್ಥಿನಿಗೆ ತಾಳಿ ಕಟ್ಟಿದರೂ ಪೊಲೀಸರೇಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳಲಾಗುತ್ತಿದೆ.

ಇದಕ್ಕೆ ಈಗ ಮಂಡ್ಯ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಇದು 2021 ರಲ್ಲಿ ನಡೆದ ಘಟನೆಯಾಗಿದ್ದು, ಈ ಬಗ್ಗೆ ಮಂಡ್ಯ ಪೂರ್ವ ಠಾಣೆಯಲ್ಲಿ ವಿಚಾರಣೆಯಾಗಿರುತ್ತದೆ. ಇತ್ತೀಚೆಗೆ ನಡೆದ ಘಟನೆಯಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ವಿಡಿಯೋವನ್ನು ಶೇರ್‌ ಮಾಡದಂತೆ ಮನವಿ ಮಾಡಿದ್ದಾರೆ.

ಆ ಸಂದರ್ಭದಲ್ಲಿ ಈ ಪ್ರಕರಣದ ವಿಚಾರಣೆ ನಡೆದು ಬಳಿಕ ಸುಖಾಂತ್ಯವಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read