ವಾಸ್ತು ಶಾಸ್ತ್ರದ ಪ್ರಕಾರ ಶಾಂತಿ – ಸಂತೋಷಕ್ಕಾಗಿ ಮನೆಯಲ್ಲಿರಲಿ ಈ ವಸ್ತು

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವೆಲ್ಲ ವಸ್ತುಗಳಿದ್ದರೆ ನಕಾರಾತ್ಮಕ ಶಕ್ತಿಯ ಬಲ ಹೆಚ್ಚಾಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ವಾಸ್ತುಶಾಸ್ತ್ರ ಯಾವೆಲ್ಲ ವಸ್ತುಗಳು ಮನೆಯಲ್ಲಿದ್ದರೆ ಒಳ್ಳೆಯದು ಎಂಬುದನ್ನೂ ಹೇಳಿದೆ. ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ ಸಂತೋಷ, ಶಾಂತಿ, ಶ್ರೀಮಂತಿಕೆ ಮನೆಯಲ್ಲಿ ಸದಾ ನೆಲೆಸಿರುತ್ತದೆ.

ಸ್ಫಟಿಕ ಮನೆಯಲ್ಲಿದ್ದರೆ ಬಹಳ ಒಳ್ಳೆಯದು. ವಾಸ್ತು ಶಾಸ್ತ್ರದ ಪ್ರಕಾರ ಸ್ಫಟಿಕವನ್ನು ಸೂಕ್ತ ಸ್ಥಳದಲ್ಲಿಡಬೇಕು. ಮನೆಯ ಪೂರ್ವ ದಿಕ್ಕಿಗೆ ಸ್ಫಟಿಕವನ್ನಿಟ್ಟರೆ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ಉತ್ತರ ದಿಕ್ಕಿನಲ್ಲಿಟ್ಟರೆ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.

ಮೂರು ಕಾಲಿನ ಕಪ್ಪೆಯಿರುವ ಮೂರ್ತಿಯನ್ನು ಮನೆಯಲ್ಲಿಡಬೇಕು. ಇದು ಧನ, ಸಂಪತ್ತು ಹಾಗೂ ಸೌಭಾಗ್ಯದ ರೂಪವಾಗಿದ್ದು, ಮನೆಯ ಮುಖ್ಯದ್ವಾರದ ಸಮೀಪ ಇದನ್ನು ಇಡಬೇಕು. ಅಡುಗೆ ಮನೆ, ಬೆಡ್ ರೂಂ ಹಾಗೂ ಶೌಚಾಲಯದಲ್ಲಿ ಇದನ್ನು ಇಡಬಾರದು.

ಸಂಪತ್ತು, ಯಶಸ್ಸು ಹಾಗೂ ಸೌಭಾಗ್ಯದ ಸಂಕೇತ ಲಾಫಿಂಗ್ ಬುದ್ಧ. ಈ ಮೂರ್ತಿ ಎಲ್ಲಿದೆಯೂ ಅಲ್ಲಿಗೆ ಸಂಪತ್ತು ಅರಸಿ ಬರುತ್ತೆ ಎಂಬ ನಂಬಿಕೆ ಇದೆ. ಹಾಗಾಗಿ ಮನೆ, ವ್ಯಾಪರ ಸ್ಥಳ, ಹೊಟೇಲ್ ಹೀಗೆ ಎಲ್ಲ ಕಡೆ ಈ ಲಾಫಿಂಗ್ ಬುದ್ಧನ ಮೂರ್ತಿಯನ್ನು ನೋಡಬಹುದಾಗಿದೆ.

ಲವ್ ಬರ್ಡ್ಸ್ ಮನೆಯಲ್ಲಿರುವುದರಿಂದ ದಂಪತಿ ನಡುವಿನ ಸಂಬಂಧ ವೃದ್ಧಿಯಾಗುತ್ತದೆ. ಪರಸ್ಪರ ಪ್ರೀತಿ- ಗೌರವ ಹೆಚ್ಚಾಗುತ್ತದೆ.

ಗಾಳಿ ಗಂಟೆ ಮನೆಗೆ ಧನಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಗಾಳಿ ಬೀಸಿದಾಗ ಬಾರಿಸುವ ಗಂಟೆ ಶಬ್ಧ ಮನೆಗೆ ಬಹಳ ಒಳ್ಳೆಯದೆಂದು ಪರಿಗಣಿಸಲಾಗಿದೆ. ಹಾಗಾಗಿ ಮನೆಯಲ್ಲಿ ಗಾಳಿ ಗಂಟೆಯನ್ನು ತೂಗಿ ಹಾಕಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read