ವಾಸ್ತು ಪ್ರಕಾರ ರಾಶಿಗನುಗುಣವಾಗಿ ಮನೆಯಲ್ಲಿ ಬೆಳೆಸಿ ಈ ಗಿಡ

ಗಿಡ ಮರ ಮನೆಯಲ್ಲಿ ಹಸಿರು ಹೆಚ್ಚಿಸುವುದೊಂದೇ ಅಲ್ಲ ಮನೆಯ ಸುಖ-ಶಾಂತಿಗೂ ಕಾರಣವಾಗುತ್ತದೆ. ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದಲ್ಲಿ ಗಿಡ ಮರಗಳಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಜ್ಯೋತಿಷ್ಯದಲ್ಲಿ 12 ರಾಶಿಗಳ ಬಗ್ಗೆ ಹೇಳಲಾಗಿದೆ. ಪ್ರತಿಯೊಂದು ರಾಶಿಗೂ ಬೇರೆ ಬೇರೆ ಗ್ರಹ ಅಧಿಪತಿಯಾಗಿರುತ್ತದೆ. ರಾಶಿಗನುಗುಣವಾಗಿ ಮನೆಯಲ್ಲಿ ಗಿಡಗಳನ್ನು ಬೆಳೆಸಿದ್ರೆ ಜಾತಕದ ದೋಷ ನಿವಾರಣೆಯಾಗುವ ಜೊತೆಗೆ ಬಡತನ ಹತ್ತಿರ ಸುಳಿಯುವುದಿಲ್ಲ.

ಮೇಷ ಹಾಗೂ ವೃಶ್ಚಿಕ ರಾಶಿಯವರ  ಗ್ರಹ ಮಂಗಳ. ಈ ರಾಶಿಯವರು ಮನೆಯಲ್ಲಿ ಕೆಂಪು ಗುಲಾಬಿ ಗಿಡವನ್ನು ಬೆಳೆಸಬೇಕು. ಶಿವಲಿಂಗಕ್ಕೆ ಕೆಂಪು ಗುಲಾಬಿಯನ್ನು ಅರ್ಪಿಸಬೇಕು.

ವೃಷಭ ಹಾಗೂ ತುಲಾ ರಾಶಿಯವರ ಗ್ರಹ ಶುಕ್ರ. ಮನೆಯಲ್ಲಿ ಬಿಳಿ ಬಣ್ಣದ ಹೂವು ಬಿಡುವ ಗಿಡವನ್ನು ಬೆಳೆಸಿದ್ರೆ ಶುಕ್ರನ ಕೃಪೆ ಸಿಗುತ್ತದೆ. ಬಿಳಿ ಹೂವನ್ನು ಶಿವಲಿಂಗಕ್ಕೆ ಅರ್ಪಿಸಬೇಕು.

ಬುಧ ಗ್ರಹ ಕನ್ಯಾ ಹಾಗೂ ಮಿಥುನ ರಾಶಿಯ ಗ್ರಹವಾಗಿದೆ. ಈ ರಾಶಿಯವರು ಮನೆಯಲ್ಲಿ ಸಣ್ಣ ಗಿಡವನ್ನು ಬೆಳೆಸಬೇಕು. ಹೂ ಬಿಡದ ಆದ್ರೆ ಸುಂದರವಾಗಿ ಕಾಣುವ ಗಿಡವನ್ನು ಬೆಳೆಸಬೇಕು.

ಕರ್ಕ ರಾಶಿಯ ದೇವರು ಚಂದ್ರ. ಈ ರಾಶಿಯವರು ಮನೆಯಲ್ಲಿ ತುಳಸಿ ಜೊತೆಗೆ ಸಣ್ಣ ಸಣ್ಣ ಔಷಧಿ ಸಸ್ಯಗಳನ್ನು ಬೆಳೆಸಬೇಕು.

ಸಿಂಹ ರಾಶಿಯವರು ಮನೆಯಲ್ಲಿ ಕೆಂಪು ಹೂವಿನ ಗಿಡವನ್ನು ಬೆಳೆಸಬೇಕು. ಸೂರ್ಯೋದಯದ ವೇಳೆ ಗಿಡಕ್ಕೆ ನೀರನ್ನು ಹಾಕಬೇಕು.

ಧನು ಹಾಗೂ ಮೀನ ರಾಶಿಯವರ ಗ್ರಹ ಗುರು. ಮನೆಯಲ್ಲಿ ಹಳದಿ ಹೂವಿನ ಗಿಡ ಬೆಳೆಸುವುದ್ರಿಂದ ಸಾಕಷ್ಟು ಲಾಭವಿದೆ.

ಮಕರ ಹಾಗೂ ಕುಂಭ ರಾಶಿಯವರ ಗ್ರಹ ಶನಿ. ಈ ರಾಶಿಯವರು ಹೂ, ಹಣ್ಣು ಬಿಡದ ಆದ್ರೆ ಹೆಚ್ಚು ನೆರಳು ಬೀಳುವ ಗಿಡ ಬೆಳೆಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read