ದೇಶಾದ್ಯಂತ ಈಗ ಮದುವೆಯ ಸೀಸನ್. ಮದುವೆ ಸಮಾರಂಭಗಳಲ್ಲಿ ನಡೆಯುವ ಕೆಲವೊಂದು ಫನ್ನಿ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. ಈ ವೀಡಿಯೊಗಳಲ್ಲಿ ಕೆಲವು ತಮಾಷೆಯಾಗಿದ್ದರೆ ಇನ್ನು ಕೆಲವು ಆಘಾತಕಾರಿಯಾಗಿವೆ. ಇಂಥದ್ದೇ ಶಾಕಿಂಗ್ ದೃಶ್ಯವೊಂದು ನೆಟ್ಟಿಗರನ್ನು ಕಂಗಾಲಾಗಿಸಿದೆ. ಈ ವೀಡಿಯೊದಲ್ಲಿ, ವಧು-ವರರು ಮದುವೆಯ ವೇದಿಕೆಯ ಮೇಲೆ ನಿಂತಿದ್ದಾರೆ.
ವರಮಾಲಾ ಕಾರ್ಯಕ್ರಮದ ಬಳಿಕ ವರ, ವಧುವಿಗೆ ಸಿಹಿ ತಿನ್ನಿಸಲು ಪ್ರಾರಂಭಿಸುತ್ತಾನೆ. ಆದರೆ ವಧು ಸಿಕ್ಕಾಪಟ್ಟೆ ಕೋಪದಲ್ಲಿದ್ಲು. ಆಕೆ ರಸಗುಲ್ಲ ತಿನ್ನಲು ನಿರಾಕರಿಸಿದ್ದಲ್ಲದೆ, ಅದನ್ನು ವರನ ಕೈಯಿಂದ ತೆಗೆದುಕೊಂಡು ಎಸೆದುಬಿಡ್ತಾಳೆ. ವಧುವಿನ ಈ ಅವತಾರ ನೋಡಿ ಎಲ್ಲರಿಗೂ ಶಾಕ್. ಕುಟುಂಬಸ್ಥರು ಕೂಡ ಆಘಾತಕ್ಕೊಳಗಾಗಿದ್ದಾರೆ. ವರನೇನೂ ಕಮ್ಮಿ ಆಸಾಮಿಯಲ್ಲ. ವಧು ಆತನಿಗೆ ನೀರು ಕುಡಿಸಲು ಬಂದಾಗ ಸಿಟ್ಟಿನಲ್ಲಿ ಅದನ್ನು ಚೆಲ್ಲಿಬಿಡ್ತಾನೆ.
ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ವಧು, ನೀರಿನ ಲೋಟವನ್ನು ಅತಿಥಿಗಳೆಡೆಗೆ ಎಸೆದಿದ್ದಾಳೆ. ಮದುವೆ ಮಂಟಪದಲ್ಲಿ ನಡೆದ ಈ ಘಟನೆ ವೈರಲ್ ಆಗಿದೆ. ಇದು ತಮಾಷೆ ಎನಿಸಿದರೂ, ಮದುವೆಯ ದಿನವೇ ಇಷ್ಟೊಂದು ಕಿತ್ತಾಡಿಕೊಳ್ತಿರೋ ದಂಪತಿ ಭವಿಷ್ಯದಲ್ಲಿ ಹೇಗಿರಬಹುದು ಅನ್ನೋ ಚಿಂತೆ ಅವರ ಕುಟುಂಬಸ್ಥರನ್ನು ಕಾಡಲಾರಂಭಿಸಿದೆ.
https://twitter.com/gharkekalesh/status/1674105447295631360?ref_src=twsrc%5Etfw%7Ctwcamp%5Etweetembed%7Ctwterm%5E1674105447295631360%7Ctwgr%5E5b64d867a4ff1dfcc3fe3d2eb40b21f66ee8d031%7Ctwcon%5Es1_&ref_url=https%3A%2F%2Fzeenews.india.com%2Fhindi%2Foff-beat%2Fgroom-refuse-to-eat-rasgulla-bride-got-angry-high-voltage-drama-in-front-of-the-guests%2F1758625