‘ವಂದೇ ಭಾರತ್’ ರೈಲು ಸೇವೆ ಆರಂಭಿಸಲು ಸಂಸದ ರಾಘವೇಂದ್ರ ಸಲಹೆ

ಶಿವಮೊಗ್ಗ: ಶಿವಮೊಗ್ಗ ಬೆಂಗಳೂರು ನಡುವೆ `ವಂದೇ ಭಾರತ್’ ರೈಲು ಸೇವೆ ಆರಂಭಿಸಬೇಕೆಂಬುದು ಸೇರಿದಂತೆ ಜಿಲ್ಲೆಯ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಸಂಬAಧಿಸಿದAತೆ ಸಂಸದ ಬಿ.ವೈ. ರಾಘವೇಂದ್ರ ಹುಬ್ಬಳ್ಳಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

ಶಿವಮೊಗ್ಗ, ಸಾಗರ, ತಾಳಗುಪ್ಪ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಅಮೃತ್ ಭಾರತ್ ಯೋಜನೆಯಡಿ ಹಣ ನೀಡಲಾಗಿದೆ. 22.5 ಕೋಟಿ ರೂ. ವೆಚ್ಚದಲ್ಲಿ ತಾಳಗುಪ್ಪ ರೈಲು ನಿಲ್ದಾಣ ಆಧುನೀಕರಣಗೊಳಿಸಲಾಗುವುದು. ಶಿವಮೊಗ್ಗ ನಗರ ರೈಲ್ವೆ ನಿಲ್ದಾಣ ಆಧುನೀಕರಣಕ್ಕೆ 19.25 ಕೋಟಿ ರೂ., ಸಾಗರ ರೈಲುನಿಲ್ದಾಣ ಅಭಿವೃಧ್ದಿಗೆ 22.10 ಕೋಟಿ ರೂ. ನೀಡಿದ್ದು, 33ಕೋಟಿ ರೂ. ವೆಚ್ಚದಲ್ಲಿ ಗೂಡ್ಸ್ ಯಾರ್ಡ್ ಅಭಿವೃದ್ಧಿಪಡಿಸಲು ಕೇಂದ್ರ ರೈಲ್ವೆ ಇಲಾಖೆ ಅನುದಾನ ಒದಗಿಸಿದೆ.
ಗ್ರಾನೈಟ್ ನೆಲಹಾಸಿನ ಫ್ಲಾಟ್‌ ಫಾರಂ ಡಿಜಿಟಲ್ ಸಿಗ್ನಲ್ಸ್, ಫ್ಲಾಟ್‌ ಫಾರಂ ಶೆಲ್ಟರ್, ಪಾರ್ಕಿಂಗ್ ಶೆಡ್, ಕಾಂಪೌಂಡ್ ನಿರ್ಮಾಣ, ಸರ್ಕ್ಯುಲೇಟಿಂಗ್ ಏರಿಯಾ ಅಭಿವೃದ್ಧಿ, ನಿಲ್ದಾಣದ ಸೌಂದರ್ಯೀಕರಣ, ನಿಲ್ದಾಣದ ಮುಂಭಾಗದ ಉದ್ಯಾನವನ ನಿರ್ಮಾಣ, ಫೂಟ್ ಓವರ್ ಬ್ರಿಡ್ಜ್, ಆಧುನಿಕ ಶೌಚಾಲಯ, ಗುಣಮಟ್ಟದ ವಿದ್ಯುತ್ ಬೆಳಕಿನ ವ್ಯವಸ್ಥೆ. ಸಿಸಿ ಟಿವಿ ಮೊದಲಾದ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಒದಗಿಸುವ ಯೋಜನೆ ಮಂಜೂರಾಗಿದೆ ಎಂದು ಸಂಸದರು ತಿಳಿಸಿದ್ದಾರೆ.

ಶಿವಮೊಗ್ಗ ಗೂಡ್ಸ್ ಯಾರ್ಡ್ನಲ್ಲಿ ಅಗತ್ಯ ಮೂಲ ಸೌಕರ್ಯ ಹೆಚ್ಚಳ ಮಾಡುವ ಮೂಲಕ ಜಿಲ್ಲೆಗೆ ಅಗತ್ಯವಾದ ರಸಗೊಬ್ಬರ ಪಡಿತರ, ಸಿಮೆಂಟ್ ಕಬ್ಬಿಣ ಮತ್ತಿತರ ವಸ್ತುಗಳನ್ನು ಶೀಘ್ರವಾಗಿ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳುವುದಾಗಿ ರೈಲ್ವೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

1200 ಕೋಟಿ ರೂ. ವೆಚ್ಚದಲ್ಲಿ ಮಂಜೂರಾದ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ಯೋಜನೆ ಮೊದಲನೇ ಹಂತ ಶಿವಮೊಗ್ಗ-ಶಿಕಾರಿಪುರ 46 ಕಿ.ಮೀ.ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರನ್ನು ನಿಗದಿಪಡಿಸಿದ್ದು, ಕಾಮಗಾರಿ ಪೂರ್ವಸಿದ್ಧತೆ ಆರಂಭವಾಗಿದೆ. ಮುಂದಿನ ವಾರ ಕಾಮಗಾರಿ ಆರಂಭಿಸಿ 2025ರ ಡಿಸೆಂಬರ್ ವೇಳಗೆ ಪೂರ್ಣಗೊಳಿಸಲಾಗುವುದು.

ಭದ್ರಾವತಿ, ಕಡದಕಟ್ಟೆ, ಶಿವಮೊಗ್ಗದ ಸವಳಂಗ ರಸ್ತೆ ಮತ್ತು ಕಾಶಿಪುರ ಗೇಟ್ ಬಳಿ ಮೇಲ್ಸೇತುವೆ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುವುದು. ಕೋಟೆ ಗಂಗೂರಿನಲ್ಲಿ ಶಿವಮೊಗ್ಗ ಜಿಲ್ಲೆಯ ಮೊದಲ ರೈಲ್ವೆ ಕೋಚಿಂಗ್ ಡಿಪೋ ಮಂಜೂರಾಗಿದ್ದು ರಾಜ್ಯ ಸರ್ಕಾರ ಅಗತ್ಯ ಭೂಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ.

ತಾಳಗುಪ್ಪ-ತಡಸ, ಹೊನ್ನಾವರ-ಉಡುಪಿ-ಶಿರಸಿ-ಹುಬ್ಬಳ್ಳಿ ನೂತನ ರೈಲ್ವೆ ಮಾರ್ಗ ಯೋಜನೆ ಸರ್ವೆ ಕಾರ್ಯ ಪೂರ್ಣಗೊಂಡು ನೈರುತ್ಯ ರೈಲ್ವೆ ವತಿಯಿಂದ ರೈಲ್ವೆ ಮಂಡಳಿಗೆ ವರದಿ ಸಲ್ಲಿಸಲಾಗಿದೆ. ಹಾರನಹಳ್ಳಿ, ಅರಸಾಳು ನಲ್ಲಿ ಮೈಸೂರು-ತಾಳಗುಪ್ಪ, ಮೈಸೂರು ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಸಂಸದರು ಸೂಚಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸಭೆಯಲ್ಲಿ ನೈರುತ್ಯ ರೈಲ್ವೆ ಮಹಾಪ್ರಬಂಧಕ ಸಂಜೀವ್ ಕಿಶೋರ್, ರೈಲ್ವೆ ಅಧಿಕಾರಿಗಳಾದ ಹೆಚ್.ಎಂ. ದಿನೇಶ್, ಶ್ರೀಧರ ಮೂರ್ತಿ, ಸಂತೋಷ್ ಹೆಗಡೆ, ಆಶಿಶ್ ಪಾಂಡೆ, ಆನಂದಭಾರತಿ, ಮೊದಲಾದವರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read