‌ಲಿವರ್ ಪ್ರಿಯ ಮಾಂಸಹಾರಿಗಳಿಗೆ ಇಲ್ಲಿದೆ ಸಲಹೆ

ಮಾಂಸಹಾರ ಪ್ರಿಯರಿಗೆ ಲಿವರ್ ಎಂದರೆ ತುಂಬಾ ಇಷ್ಟವಿರುತ್ತದೆ. ಮಟನ್ ಲಿವರ್ ನಿಂದ ಮಾಡಿದ ಅಡುಗೆ ಕೂಡ ತುಂಬಾ ಚೆನ್ನಾಗಿರುತ್ತದೆ. ಆದರೆ ಇದರಿಂದ ಒಂದು ರೀತಿಯ ವಾಸನೆ ಬರುತ್ತದೆ. ಆ ಕಾರಣದಿಂದ ಹೆಚ್ಚಿನವರು ಇದನ್ನು ಇಷ್ಟಪಡುವುದಿಲ್ಲ. ಈ ವಾಸನೆಯನ್ನು ಸುಲಭದಲ್ಲಿ ಹೋಗಲಾಡಿಸುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್

* ಲಿವರ್ ನಿಂದ ಬರುವ ವಾಸನೆಯನ್ನು ನಿವಾರಿಸಲು ಸ್ವಲ್ಪ ಗೋಧಿ ಹಿಟ್ಟನ್ನು ಈ ಲಿವರ್ ಮೇಲೆ ಸಿಂಪಡಿಸಿ ಅರ್ಧ ಗಂಟೆ ಹಾಗೆಯೇ ಬಿಟ್ಟು ಬಿಡಿ. ನಂತರ ಇದನ್ನು ತೊಳೆದು ಆಮೇಲೆ ಅಡುಗೆಗೆ ಬಳಸಿ. ವಾಸನೆ ಹೋಗುತ್ತದೆ.

*ಲಿವರ್ ಅನ್ನು ಕತ್ತರಿಸಿಕೊಳ್ಳಿ. ತಣ್ಣಗಿನ ನೀರನ್ನು ಒಂದು ಬೌಲ್ ಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಐಸ್ ಕ್ಯೂಬ್ಸ್ ಅನ್ನು ಕೂಡ ಹಾಕಿ. ನಂತರ ಲಿವರ್ ಪೀಸ್ ಅನ್ನು ಅರ್ಧ ಗಂಟೆಗಳ ಕಾಲ ಈ ನೀರಿನಲ್ಲಿ ನೆನೆಸಿಡಿ. ಇದರಿಂದ ಲಿವರ್ ನಲ್ಲಿರುವ ವಾಸನೆ ಹೋಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read