ಲಕ್ಷ್ಮಿ ಹೆಬ್ಬಾಳ್ಕರ್ ಸಚಿವರಾಗಲೆಂದು ಪ್ರಾರ್ಥನೆ; ಅಭಿಮಾನಿಗಳಿಂದ ರಥಕ್ಕೆ 111 ಬಾಳೆಹಣ್ಣು ಸಮರ್ಪಣೆ

ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರ ಬೀಳಲಿದೆ. ಆದರೆ ಇದಕ್ಕೂ ಮುನ್ನವೇ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿಗಳು ಅವರು ಮಂತ್ರಿಯಾಗಲೆಂದು ಪ್ರಾರ್ಥನೆ ಮಾಡಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಿ ಸಚಿವರಾಗಲಿ ಎಂದು ಪ್ರಾರ್ಥಿಸಿ ಅಭಿಮಾನಿಗಳು ರಥಕ್ಕೆ 111 ಬಾಳೆಹಣ್ಣುಗಳನ್ನು ಸಮರ್ಪಿಸಿದ್ದಾರೆ.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಮಲಪ್ರಭಾ ನದಿ ತೀರದ ಚಿಕ್ಕಹಟ್ಟಿ ಹೊಳಿ ವೀರಭದ್ರೇಶ್ವರ ಜಾತ್ರೆ ವೇಳೆ ಬಾಳೆಹಣ್ಣಿನ ಮೇಲೆ ‘ಲಕ್ಷ್ಮಿ ಅಕ್ಕಾ 2023 ಮಂತ್ರಿ ಪಕ್ಕಾ’ ಎಂದು ಬರೆದ ಅಭಿಮಾನಿಗಳು ಇದನ್ನು ರಥೋತ್ಸವದ ವೇಳೆ ರಥಕ್ಕೆ ಬಾಳೆಹಣ್ಣನ್ನು ಸಮರ್ಪಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read