ಲಂಡನ್‌ನಲ್ಲಿ ಅತ್ಯಂತ ದುಬಾರಿ ಮಹಲನ್ನೇ ಖರೀದಿಸಿದ್ದಾರೆ ಭಾರತದ ಈ ಬಿಲಿಯನೇರ್‌…..!

ಲಂಡನ್‌ನಲ್ಲಿ ಅನೇಕ ಭಾರತೀಯ ಬಿಲಿಯನೇರ್‌ಗಳು ಆಸ್ತಿ-ಪಾಸ್ತಿ ಸಂಪಾದಿಸಿದ್ದಾರೆ. ಲಕ್ಷ್ಮಿ ಮಿತ್ತಲ್‌, ಅನಿಲ್ ಅಗರ್ವಾಲ್‌ ಹೀಗೆ ಅನೇಕರು ಈಗಾಗಲೇ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಲಂಡನ್ ಬಹಳ ಹಿಂದಿನಿಂದಲೂ ಭಾರತೀಯ ಬಿಲಿಯನೇರ್‌ಗಳ ನೆಚ್ಚಿನ ನಗರ. ಇದೀಗ ಭಾರತೀಯ ಬಿಲಿಯನೇರ್ ರವಿ ರೂಯಾ ಕೂಡ ಲಂಡನ್‌ನ ಅತ್ಯಂತ ದುಬಾರಿ ಆಸ್ತಿ ಎಂದೇ ಖ್ಯಾತಿ ಪಡೆದಿರುವ ಮನೆಯನ್ನು ಖರೀದಿಸಿದ್ದಾರೆ.

145 ಮಿಲಿಯನ್ ಡಾಲರ್‌ಗೆ ಇದನ್ನು ಕೊಂಡುಕೊಂಡಿದ್ದಾರೆ. ರೂಯಾ ಖರೀದಿಸಿದ ಈ ಮಹಲಿನ ಹೆಸರು ಹ್ಯಾನೋವರ್ ಲಾಡ್ಜ್, ಇದು ಲಂಡನ್‌ನ ರೀಜೆಂಟ್ ಪಾರ್ಕ್‌ನಲ್ಲಿದೆ.ಒಳಾಂಗಣ ವಿನ್ಯಾಸಕಾರರಾದ ಡಾರ್ಕ್ ಮತ್ತು ಟೇಲರ್ ಪ್ರಕಾರ, ಹ್ಯಾನೋವರ್ ಲಾಡ್ಜ್ ಲಂಡನ್‌ನ ಅತ್ಯಂತ ದುಬಾರಿ ಖಾಸಗಿ ವಸತಿ ಆಸ್ತಿಯಾಗಿದೆ. ಇದು 19 ನೇ ಶತಮಾನದ ಆರಂಭದಲ್ಲಿ ನಿರ್ಮಿಸಲಾದ ಕಟ್ಟಡ.

ಇದನ್ನು ಪ್ರಸಿದ್ಧ ವಾಸ್ತುಶಿಲ್ಪಿ ಜಾನ್ ನ್ಯಾಶ್ ವಿನ್ಯಾಸಗೊಳಿಸಿದ್ದಾರೆ. ಈ ಮೊದಲು ಇದು ರಷ್ಯಾದ ಬಿಲಿಯನೇರ್ ಆಂಡ್ರೇ ಗೊಂಚರೆಂಕೊ ಅವರ ಒಡೆತನದಲ್ಲಿತ್ತು. ಅವರು 2012ರಲ್ಲಿ ರಾಜ್‌ಕುಮಾರ್ ಬಾಗ್ರಿಯಿಂದ ಈ ಆಸ್ತಿಯನ್ನು 120 ಮಿಲಿಯನ್‌ ಡಾಲರ್‌ಗೆ ಖರೀದಿಸಿದ್ದರು. ಶತಮಾನಗಳಷ್ಟು ಹಳೆಯದಾದ ಈ ಮಹಲು ಇನ್ನೂ ನಿರ್ಮಾಣ ಹಂತದಲ್ಲಿದೆ. ಈ ಕಾರಣದಿಂದಾಗಿ ಐಷಾರಾಮಿ ಕಟ್ಟಡವಾದರೂ ಕೊಂಚ ಕಡಿಮೆ ಬೆಲೆಗೆ ಲಭ್ಯವಿತ್ತು. ಹಾಗಾಗಿ ರವಿ ರೂಯಾ ಇದನ್ನು ಕೊಂಡುಕೊಂಡಿದ್ದಾರೆ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read