ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ನ ಮಿಶ್ರ ಡಬಲ್ಸ್ ಫೈನಲ್ ನಲ್ಲಿ ಖ್ಯಾತ ಟೆನಿಸ್ ಆಟಗಾರರಾದ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ಜೋಡಿ ಪರಾಭವಗೊಂಡಿದ್ದು, ಆದರೆ ಅಭಿಮಾನಿಗಳು ಮಾತ್ರ ಇವರ ಅಂದಿನ ಆಟವನ್ನು ಮೆಲಕು ಹಾಕುತ್ತಿದ್ದಾರೆ.
ಇದರ ಮಧ್ಯೆ ಮಿಶ್ರ ಡಬಲ್ಸ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ರೋಹನ್ ಬೋಪಣ್ಣ ಅವರ ಪತ್ನಿ ಸುಪ್ರಿಯಾ ಅವರ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅಭಿಮಾನಿಯೊಬ್ಬರು ‘ನಾನು ಕಂಡಂತೆ ಈಕೆ ಜಗತ್ತಿನಲ್ಲಿ ಅತ್ಯಂತ ಸುಂದರ ಮಹಿಳೆ’ ಎಂದು ಬಣ್ಣಿಸಿದ್ದಾರೆ. ಇದಕ್ಕೆ ರೋಹನ್ ಬೋಪಣ್ಣ ಕೂಡ ಪ್ರತಿಕ್ರಿಯಿಸಿದ್ದು ‘ನಾನೂ ಇದನ್ನು ಒಪ್ಪುತ್ತೇನೆ’ ಎಂದಿದ್ದಾರೆ.
ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಕರ್ನಾಟಕದ ಕೊಡಗಿನ ರೋಹನ್ ಬೋಪಣ್ಣ ಅವರು 2012ರಲ್ಲಿ ಸುಪ್ರಿಯ ಅಣ್ಣಯ್ಯ ಅವರನ್ನು ವಿವಾಹವಾಗಿದ್ದು, ದಂಪತಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಮ್ ಪಂದ್ಯ ವೀಕ್ಷಿಸಲು ರೋಹನ್ ಬೋಪಣ್ಣ ಕುಟುಂಬ ಮೆಲ್ಬೋರ್ನ್ ಗೆ ತೆರಳಿದ್ದು, ಮಿಶ್ರ ಡಬಲ್ಸ್ ಸೆಮಿ ಫೈನಲ್ ನಲ್ಲಿ ಗೆದ್ದ ವೇಳೆ ರೋಹನ್ ಅವರ ಪುತ್ರಿ ತ್ರಿಧಾರನ್ನು ಎತ್ತಿಕೊಂಡು ಸಾನಿಯಾ ಮಿರ್ಜಾ ಸಂಭ್ರಮಿಸಿದ್ದರು.
https://twitter.com/brookeabeyer/status/1618805179352256512?ref_src=twsrc%5Etfw%7Ctwcamp%5Etweetembed%7Ctwterm%5E1618805179352256512%7Ctwgr%5E555c7e3fc3acba5fa86a10a236cc85daab4dce38%7Ctwcon%5Es1_&ref_url=https%3A%2F%2Fzeenews.india.com%2Ftennis%2Frohan-bopannas-reaction-to-fan-calling-his-wife-most-beautiful-women-ever-goes-viral-check-here-2566936.html