ರೈಲು ಪ್ರಯಾಣಿಕರ ಗಮನಕ್ಕೆ: ಯಶವಂತಪುರ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಮಹತ್ವದ ಬದಲಾವಣೆ

ಬೆಂಗಳೂರು: ಪ್ರಯಾಣಿಕರ ಗಮನಕ್ಕೆ…. ನವೀಕರಣ ಕಾರ್ಯ ಹಿನ್ನೆಲೆಯಲ್ಲಿ ಯಶವಂತಪುರ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ 1ರ ಮೂಲಕ ಪ್ರವೇಶಿಸುವ ಪ್ರಯಾಣಿಕರಿಗೆ ನಿರ್ಬಂಧಿಸಲಾಗುತ್ತಿದೆ.

ಜುಲೈ 18ರಿಂದ ನವೀಕರಣ ಕಾರ್ಯ ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಯಶವಂತಪುರ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ 1ರ ಮೂಲಕ ಪ್ರವೇಶಕ್ಕೆ ಅವಕಾಶವಿಲ್ಲ.

ಪ್ರಯಾಣಿಕರು ಯಶವಂತಪುರ ಮೆಟ್ರೋ ನಿಲ್ದಾಣದ ಬಳಿ ಇರುವ ಪ್ಲಾಟ್ ಫಾರ್ಮ್ 6ರ ಸೈಡ್ ಎಂಟ್ರಿಯಿಂದ ನಿಲ್ದಾಣಕ್ಕೆ ಪ್ರವೇಶಿಸಲು ಹಾಗೂ ನಿಲ್ದಾಣದಲ್ಲಿನ ಕಾಲು ಮೇಲ್ಸೇತುವೆಗಳ ಮೂಲಕ ಇತರ ಪ್ಲಾಟ್ ಫಾರ್ಮ್ ಗಳಿಗೆ ಪ್ರವೇಶಿಸಲು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ ಪ್ಲಾಟ್ ಫಾರ್ಮ್ 6ರಲ್ಲಿ ಮಾತ್ರ ಪಾರ್ಕಿಂಗ್ ಲಭ್ಯವಿರುತ್ತದೆ. ಹಾಗೂ ಬ್ಯಾಟರಿ ಚಾಲಿತ ವಾಹನಗಳು ಶುಲ್ಕದ ಆಧಾರದ ಮೇಲೆ ಲಭ್ಯವಿರುತ್ತದೆ ಡಿಜಿಟಲ್ ಮಾಹಿತಿ ಫಲಕಗಳು ಕೆಲ ದಿನಗಳವರೆಗೆ ಬಂದ್ ಆಗಲಿವೆ. ಈ ಸಂದರ್ಭದಲ್ಲಿ ಎಲ್ಲಾ ರೈಲು ಸಂಬಂಧಿತ ಮಾಹಿತಿಯನ್ನು ಹಸ್ತಚಾಲಿತ ಪ್ರಕಟಣೆ ಮೂಲಕ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read