ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉಳಿಯಲೂ ಇದೆ ವ್ಯವಸ್ಥೆ, ಒಂದು ರಾತ್ರಿಯ ಬುಕ್ಕಿಂಗ್‌ಗೆ ಕೇವಲ 100 ರೂಪಾಯಿ…!

ರೈಲು ಪ್ರಯಾಣ ತುಂಬಾ ಆರಾಮದಾಯಕ. ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಅನೇಕ ಸೌಲಭ್ಯಗಳನ್ನು ಒದಗಿಸುತ್ತದೆ. ಹಬ್ಬ ಹರಿದಿನಗಳು ಮತ್ತು ಬೇಸಿಗೆ ರಜಾ ದಿನಗಳಲ್ಲಿನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಇದಲ್ಲದೇ ಇತರೆ ಸೌಲಭ್ಯಗಳನ್ನು ಕೂಡ ಕಲ್ಪಿಸಲಾಗಿದೆ. ರೈಲು ನಿಲ್ದಾಣದಲ್ಲಿ ತಂಗುವ ಅವಕಾಶ ಕೂಡ ಪ್ರಯಾಣಿಕರಿಗಿದೆ.

ಹೆಚ್ಚಿನ ಪ್ರಯಾಣಿಕರಿಗೆ ಈ ಸೌಲಭ್ಯದ ಬಗ್ಗೆ ತಿಳಿದಿಲ್ಲ. ರೈಲು ನಿಲ್ದಾಣದಲ್ಲಿ ಉಳಿಯಬೇಕೆಂದರೆ ನಿಲ್ದಾಣದಲ್ಲಿಯೇ ನಿಮಗೆ ಕೊಠಡಿ ಸಿಗುತ್ತದೆ. ಇದಕ್ಕಾಗಿ ದುಬಾರಿ ಹೋಟೆಲ್‌ಗೆ ಹೋಗಿ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ರೈಲ್ವೆ ನಿಲ್ದಾಣದಲ್ಲಿ ನಿಮಗೆ ಅತ್ಯಂತ ಅಗ್ಗದ ಕೊಠಡಿಗಳು ಸಿಗುತ್ತವೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಂಗಲು ಕೊಠಡಿಗಳ ವ್ಯವಸ್ಥೆಯೂ ಇದೆ. ಇವು ಎಸಿ ರೂಂಗಳಾಗಿದ್ದು, ಹೋಟೆಲ್ ರೂಂನಂತೆಯೇ ಎಲ್ಲಾ ಸೌಲಭ್ಯಗಳಿರುತ್ತವೆ.

ಒಂದು ರಾತ್ರಿಗೆ ಈ ಕೊಠಡಿಯ ಬುಕಿಂಗ್ ಶುಲ್ಕ 100 ರಿಂದ 700 ರೂಪಾಯಿ. ಮೊದಲು IRCTC ಖಾತೆಯನ್ನು ಓಪನ್‌ ಮಾಡಿ. ಲಾಗಿನ್ ನಂತರ ಮೈ ಬುಕಿಂಗ್ ಆಯ್ಕೆಗೆ ಹೋಗಿ. ಟಿಕೆಟ್ ಬುಕಿಂಗ್‌ನ ಕೆಳಭಾಗದಲ್ಲಿ ‘ರಿಟೈರಿಂಗ್ ರೂಮ್’ ಆಯ್ಕೆಯು ಕಾಣಿಸುತ್ತದೆ. ಇಲ್ಲಿ ಕ್ಲಿಕ್ ಮಾಡುವ ಮೂಲಕ ನೀವು ಕೊಠಡಿಯನ್ನು ಕಾಯ್ದಿರಿಸಬಹುದು. ಇಲ್ಲಿ ನಿಮ್ಮ ವೈಯಕ್ತಿಕ ಮತ್ತು ಪ್ರಯಾಣದ ಮಾಹಿತಿಯನ್ನು ನಮೂದಿಸಬೇಕು. ಹಣ ಪಾವತಿ ಮಾಡಿದ ನಂತರ ನಿಮ್ಮ ಕೊಠಡಿಯನ್ನು ಬುಕ್ ಮಾಡಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read