ರೇವಣ್ಣ ಆದರೂ ಬರಲಿ ದೇವೇಗೌಡರು ಬಂದರೂ ಸರಿ: ಕೆ.ಆರ್. ಪೇಟೆಯಲ್ಲಿ ಸ್ಪರ್ಧೆ ಕುರಿತಂತೆ ಸಚಿವ ನಾರಾಯಣ ಗೌಡ ವ್ಯಂಗ್ಯ

ಮುಂಬರುವ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗಿಂತ ಮುಂಚಿತವಾಗಿಯೇ ಅಖಾಡ ರಂಗೇರಿದ್ದು, ಹಲವು ರಾಜಕೀಯ ಲೆಕ್ಕಾಚಾರಗಳು ಹರಿದಾಡುತ್ತಿವೆ. ಈ ಪೈಕಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಚ್.ಡಿ. ರೇವಣ್ಣ ಕಣಕ್ಕಿಳಿಯಬಹುದು ಎಂಬ ಮಾತುಗಳೂ ಸಹ ಕೇಳಿ ಬರುತ್ತಿವೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆ ಆರ್ ಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಸಚಿವ ನಾರಾಯಣಗೌಡ, ರೇವಣ್ಣನಾದರೂ ಬರಲಿ ಅಥವಾ ದೇವೇಗೌಡರೂ ಸಹ ಬರಲಿ. ನನಗೇನು ಭಯವಿಲ್ಲ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಬಂದರೂ ಸಹ ಚುನಾವಣೆ ಎದುರಿಸಲು ತೊಂದರೆ ಇಲ್ಲ ಎಂದು ಹೇಳಿರುವ ನಾರಾಯಣಗೌಡ, ಯಾರು ಗೆಲ್ಲಬೇಕೆಂಬುದನ್ನು ಕ್ಷೇತ್ರದ ಜನತೆ ತೀರ್ಮಾನಿಸುತ್ತಾರೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read