ರುಚಿಯಾದ ‘ನೆಲ್ಲಿಕಾಯಿ ತಂಬುಳಿ’ ಸವಿದು ನೋಡಿ

ಮಧ್ಯಾಹ್ನದ ಅಡುಗೆಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ…? ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ ಅಥವಾ ಸಾಂಬಾರು ತಿನ್ನುವುದಕ್ಕೆ ಬೇಜಾರು ಅನಿಸಿದಾಗ ನೆಲ್ಲಿಕಾಯಿ ಬಳಸಿ ಮಾಡಿ ಈ ತಂಬುಳಿ.

ಮೊದಲಿಗೆ 3 ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಅದರ ಬೀಜ ತೆಗೆದು ಕತ್ತರಿಸಿಕೊಳ್ಳಿ. ನಂತರ ¼ ಸ್ಪೂನ್ ಎಣ್ಣೆಯನ್ನು ಒಂದು ಚಿಕ್ಕ ಪ್ಯಾನ್ ಗೆ ಹಾಕಿಕೊಂಡು ಅದಕ್ಕೆ 1/4 ಟೀ ಸ್ಪೂನ್ ಜೀರಿಗೆ ಹಾಕಿ ನಂತರ 1 ಹಸಿಮೆಣಸು ಕತ್ತರಿಸಿ ಹಾಕಿ ಫ್ರೈ ಮಾಡಿ.

ಇದು ತಣ್ಣಗಾದ ಮೇಲೆ ಇದನ್ನು ಮಿಕ್ಸಿ ಜಾರಿಗೆ ಹಾಕಿ ಇದಕ್ಕೆ 2 ಟೇಬಲ್ ಸ್ಪೂನ್ ತೆಂಗಿನಕಾಯಿ ತುರಿ ಸೇರಿಸಿ ತುಸು ನೀರು ಹಾಕಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಇದಕ್ಕೆ 1 ಕಪ್ ಮೊಸರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮಿಕ್ಸ್ ಮಾಡಿದರೆ ರುಚಿಯಾದ ತಂಬುಳಿ ಸವಿಯಲು ಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read