ರಿಷಬ್ ಪಂಥ್ ದೇಶದ ಆಸ್ತಿ ಎಂದ ಊರ್ವಶಿ ರೌಟೇಲಾ…!

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮತ್ತು ಕ್ರಿಕೆಟಿಗ ರಿಷಬ್ ಪಂಥ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಈ ವಿಚಾರ ಊರ್ವಶಿಯವರ ಹೇಳಿಕೆಯಿಂದ ಮತ್ತೆ ಜೀವ ಪಡೆದಿದೆ.

ಡಿಸೆಂಬರ್ 2022 ರಲ್ಲಿ ಭೀಕರ ಅಪಘಾತಕ್ಕೆ ಒಳಗಾದ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಅವರ ಬಗ್ಗೆ ಪ್ರತಿಕ್ರಿಯಿಸಿದ ನಟಿ, ರಿಷಬ್ ಪಂಥ್ ದೇಶದ ಆಸ್ತಿ ಎನ್ನುವ ಮೂಲಕ ಇಬ್ಬರ ನಡುವಿನ ಸಂಬಂಧಗಳ ಗುಸುಗುಸು ಮಾತು ಮುನ್ನೆಲೆಗೆ ಬರುವಂತೆ ಮಾಡಿದ್ದಾರೆ.

ಶುಕ್ರವಾರ ಊರ್ವಶಿ ಮುಂಬೈಗೆ ವಾಪಸಾಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿದ್ದ ಪಾಪರಾಜಿ ಜೊತೆಗಿನ ಸಂವಾದದ ಸಮಯದಲ್ಲಿ, ನಟಿ ರಿಷಬ್ ರನ್ನು ಭಾರತದ ಸ್ವತ್ತು ಎಂದು ಕರೆದರು.

ಮಾಧ್ಯಮದೊಂದಿಗಿನ ಊರ್ವಶಿ ಸಂವಾದದ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಪಂಥ್ ಚೇತರಿಸಿಕೊಂಡ ಬಗ್ಗೆ ನಿಮಗೆ ತಿಳಿದಿದೆಯೇ ಎಂದು ಪಾಪರಾಜಿಗಳು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ನಟಿ, , “ಹೌದು, ಅವರು ನಮ್ಮ ದೇಶ ಮತ್ತು ಭಾರತದ ಹೆಮ್ಮೆಯ ಆಸ್ತಿ” ಎಂದು ಉತ್ತರಿಸಿದ್ದಾರೆ.

ಡಿಸೆಂಬರ್ 30 ರಂದು ರಿಷಬ್ ಪಂಥ್ ಕಾರ್ ಚಾಲನೆ ಮಾಡುತ್ತಿದ್ದಾಗ ಭೀಕರ ಅಪಘಾತಕ್ಕೊಳಗಾದರು. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಒಂದು ವರ್ಷ ಬೇಕಾಗುತ್ತದೆ ಎನ್ನಲಾಗಿದೆ.

https://youtu.be/2RjqAq1sfvk

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read