ರಿಲ್ಯಾಕ್ಸ್‌ ಮೂಡ್‌ನಲ್ಲಿ ರಾಹುಲ್ ಗಾಂಧಿ, ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಸೋದರಿ ಜೊತೆಗೆ ಸ್ನೋಬೈಕ್‌ ರೈಡಿಂಗ್‌….!   

ಭಾರತ್‌ ಜೋಡೋ ಯಾತ್ರೆಯ ಬಳಿಕ ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ. ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗೆ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. ಗುಲ್ಮಾರ್ಗ್‌ನಲ್ಲಿ ರಾಹುಲ್‌ ಹಾಗೂ ಪ್ರಿಯಾಂಕಾ ಹಿಮವಾಹನ ಸವಾರಿ ಮಾಡುತ್ತಿರುವ ವಿಡಿಯೋವನ್ನು ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್ ಬಿವಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಗಾಂಧಿ ಹಿಮದಲ್ಲಿ ಬೈಕ್‌ ಓಡಿಸ್ತಾ ಇದ್ರೆ, ರಾಹುಲ್‌ ಸ್ಕೀ ಕನ್ನಡಕ ಧರಿಸಿ ಹಿಂದೆ ಕುಳಿತಿದ್ದಾರೆ. ಇಬ್ಬರೂ ಸ್ನೋ ಬೈಕ್‌ ರೈಡ್‌ ಅನ್ನು ಸಖತ್ತಾಗಿ ಎಂಜಾಯ್‌ ಮಾಡಿದ್ದಾರೆ. ಸ್ವಲ್ಪ ದೂರ ತೆರಳಿದ ಬಳಿಕ ರಾಹುಲ್‌ ಗಾಂಧಿ ಖುದ್ದಾಗಿ ಬೈಕ್‌ ಓಡಿಸಿದ್ದಾರೆ. ಪ್ರಿಯಾಂಕಾ ಹಿಂದಿನ ಸೀಟಿನಲ್ಲಿ ಕುಳಿತು ಕಾಶ್ಮೀರದ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಬುಧವಾರ ರಾಹುಲ್‌ ಗಾಂಧಿ ಕಣಿವೆ ರಾಜ್ಯಕ್ಕೆ ಎರಡು ದಿನಗಳ ವೈಯಕ್ತಿಕ ಭೇಟಿ ಕೈಗೊಂಡಿದ್ದರು.

ಉತ್ತರ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಸ್ಕೀಯಿಂಗ್‌ಗೆ ಕೂಡ ತೆರಳಿದ್ದರು. ಎರಡು ವಾರಗಳ ಹಿಂದೆ ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ರಾಹುಲ್‌ ಪೂರ್ಣಗೊಳಿಸಿದ್ದರು. ಇದೀಗ ಕೊರೆಯುವ ಚಳಿಯಲ್ಲಿ ಮತ್ತೊಮ್ಮೆ ತಮ್ಮ ಟ್ರೇಡ್‌ಮಾರ್ಕ್ ಟಿ-ಶರ್ಟ್‌ನಲ್ಲಿ ಶ್ರೀನಗರದಿಂದ 52 ಕಿಮೀ ದೂರದಲ್ಲಿರುವ ಗುಲ್ಮಾರ್ಗ್ಗೆ ಆಗಮಿಸಿದ್ದರು. ತಂಗ್‌ಮಾರ್ಗ್ ಪಟ್ಟಣದಲ್ಲಿ ರಾಹುಲ್‌ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿಲು ಈ ವೇಳೆ ರಾಹುಲ್‌ ನಿರಾಕರಿಸಿದ್ದಾರೆ. ಗುಲ್ಮಾರ್ಗ್‌ನಲ್ಲಿ ರಾಗಾ, ಪ್ರಸಿದ್ಧ ಗೊಂಡೋಲಾ ಕೇಬಲ್ ಕಾರಿನಲ್ಲಿ ಸವಾರಿ ಮಾಡಿದ್ದಾರೆ.  ಅಫರ್ವಾತ್‌ನಲ್ಲಿ ಸ್ಕೀಯಿಂಗ್‌ ಮಜಾ ಅನುಭವಿಸಿದ್ದಾರೆ. ಅಲ್ಲಿಂದ ತೆರಳುವ ಮುನ್ನ ಪ್ರವಾಸಿಗರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ರಾಹುಲ್‌ ಗಾಂದಿ ಅವರೊಂದಿಗೆ ಭದ್ರತಾ ಸಿಬ್ಬಂದಿ ಕೂಡ ಸ್ಕೀಯಿಂಗ್‌ ವೇಳೆ ಜೊತೆಗೆ ತೆರಳಿದ್ದರು. ಕಣಿವೆ ರಾಜ್ಯದಲ್ಲಿ ರಾಹುಲ್‌ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

https://twitter.com/srinivasiyc/status/1627353462265769986?ref_src=twsrc%5Etfw%7Ctwcamp%5Etweetembed%7Ctwterm%5E1627353462265769986%7Ctwgr%5E7c1fda5115cd862769f5aa957833ad2ad84af98d%7Ctwcon%5Es1_&ref_url=https%3A%2F%2Fwww.indiatvnews.com%2Fnews%2Findia%2Fcongress-leader-rahul-gandhi-sister-priyanka-take-snowmobiles-rides-in-gulmarg-jammu-and-kashmir-2023-02-20-848690

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read