ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವಿನ ಸೋದರತ್ವದ ಸಂಬಂಧ, ಬಾಂಧವ್ಯ, ಪ್ರೀತಿ, ಸ್ನೇಹ ಹಲವರ ಮೆಚ್ಚುಗೆ ಗಳಿಸಿದೆ. ಅವರಿಬ್ಬರೂ ಸೋದರಿ- ಸೋದರಗಿಂತ ಹೆಚ್ಚಾಗಿ ಬೆಸ್ಚ್ ಫ್ರೆಂಡ್ಸ್ ರೀತಿ ಇರುತ್ತಾರೆ.
ಅವರಿಬ್ಬರ ನಡುವಿನ ಅದಮ್ಯ ಪ್ರೀತಿ, ಬಾಂಧವ್ಯ ಸದ್ಯ ನಡೆಯುತ್ತಿರೋ ಭಾರತ್ ಜೋಡೋ ಯಾತ್ರೆ ಸಮಯದಲ್ಲೂ ವ್ಯಕ್ತವಾಗಿದ್ದು ವಿಡಿಯೋ ವೈರಲ್ ಆಗಿದೆ. ತಮ್ಮ ತಂಗಿಯನ್ನು ಆತ್ಮೀಯವಾಗಿ ಅಪ್ಪಿಕೊಂಡು ರಾಹುಲ್ ಗಾಂಧಿ ಮುತ್ತು ಕೊಡುತ್ತಿರುವ ವಿಡಿಯೋವನ್ನ ಕಾಂಗ್ರೆಸ್ ಎರಡು ಹೃದಯದ ಎಮೋಜಿಯೊಂದಿಗೆ ಹಂಚಿಕೊಂಡಿದ್ದು ವೈರಲ್ ಆಗಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಉತ್ತರ ಪ್ರದೇಶದಲ್ಲಿ “ಭಾರತ್ ಜೋಡೋ ಯಾತ್ರೆ” ಯಲ್ಲಿ ತನ್ನ ಅಣ್ಣ ರಾಹುಲ್ ಗಾಂಧಿಯೊಂದಿಗೆ ಸೇರಿಕೊಂಡರು. ಈ ವೇಳೆ ಅವರು ವೇದಿಕೆಯಲ್ಲಿ ಹಂಚಿಕೊಂಡ ಪ್ರೀತಿಯ ಕ್ಷಣವು ವೈರಲ್ ಆಗುತ್ತಿದೆ.
ವೀಡಿಯೊದೊಂದಿಗೆ, ಕಾಂಗ್ರೆಸ್ ಇತ್ತೀಚೆಗೆ ಅಕ್ಷಯ್ ಕುಮಾರ್ ಅಭಿನಯದ “ರಕ್ಷಾ ಬಂಧನ” ಚಿತ್ರದ ‘ಮೈನ್ ರಹೂನ್ ನಾ ತೇರೆ ಬಿನಾ’ (ನೀನಿಲ್ಲದೆ ಬದುಕಲು ಬಯಸುವುದಿಲ್ಲ) ಹಾಡನ್ನು ಬಳಸಿದೆ.
https://twitter.com/INCIndia/status/1610222430043406337?ref_src=twsrc%5Etfw%7Ctwcamp%5Etweetembed%7Ctwterm%5E1610222430043406337%7Ctwgr%5E3c02d9fcd104cac5576b5e848d800f4e6210db30%7Ctwcon%5Es1_&ref_url=https%3A%2F%2Fndtv.in%2Findia%2Fviral-video-rahul-gandhi-hugs-kisses-sister-priyanka-during-bharat-jodo-yatra-3661000