ರಾಜ್ಯಸಭಾ ಸಂಸದೆ ಮತ್ತು ಹಿರಿಯ ನಟಿ ಜಯಾ ಬಚ್ಚನ್, ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ಅವರ ಕಡೆ ಕೋಪದಿಂದ ಬೊಟ್ಟುಮಾಡಿ ತೋರಿಸಿರುವ ವೀಡಿಯೊವು ಬಿಜೆಪಿ ನಾಯಕರ ಕೋಪಕ್ಕೆ ಕಾರಣವಾಗಿದೆ. ಹಲವಾರು ನಾಯಕರು ಈ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದು ಖಂಡಿಸಿದ್ದಾರೆ.
ವೀಡಿಯೊದಲ್ಲಿ ಜಯಾಬಚ್ಚನ್ ಅವರು ಕೋಪದಿಂದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರತ್ತ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಮತ್ತು ಅವರತ್ತ ಬೆರಳು ತೋರಿಸುವುದನ್ನು ಸಹ ನೋಡಬಹುದು.
ಸಮಾಜವಾದಿ ಪಕ್ಷದ ಸಂಸದೆ ಜಯಾಬಚ್ಚನ್ ಅವರ ವರ್ತನೆ ಮುಜುಗರ ತಂದಿದೆ ಎಂದು ಬಿಜೆಪಿ ನಾಯಕ ಅಜಯ್ ಸೆಹ್ರಾವತ್ ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ಬಿಜೆಪಿ ನಾಯಕಿ ಅನುಜಾ ಕಪೂರ್ ಅವರು ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು “ಪಕ್ಷದಂತೆ ಸಂಸ್ಕೃತಿ……ಜಯಾ ಬಚ್ಚನ್ ಜೀ, ಕನಿಷ್ಠ ನೀವು ಹುದ್ದೆಯ ಘನತೆಯನ್ನು ಉಳಿಸಿಕೊಳ್ಳಬಹುದಿತ್ತು…….” ಎಂದು ಬರೆದಿದ್ದಾರೆ.
https://twitter.com/anujakapurindia/status/1624687289476739073?ref_src=twsrc%5Etfw%7Ctwcamp%5Etweetembed%7Ctwterm%5E1624687289476739073%7Ctwgr%5E3600a439699177dc4b8ef8c22073d49a8593af9e%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Ftheindianexpress-epaper-dh45fdd5a8110244f1a752805dfc5bb160%2Fvideoofjayabachchanpointingfingeratrschairmanjagdeepdhankharinparliamentgoesviralbjpleaderscondemn-newsid-n471140412