ಬೆಂಗಳೂರು: ತುಂತುರು ನೀರಾವರಿಗೆ ಸಹಾಯಧನದಡಿ ಪರಿಕರಗಳನ್ನು ಪಡೆಯಲು ಇದ್ದ ನಿರ್ಬಂಧವನ್ನು ಸರ್ಕಾರ ಸಡಿಲಿಕೆ ಮಾಡಿದೆ. ಎಲ್ಲಾ ವರ್ಗದ ರೈತರಿಗೆ ಸಬ್ಸಿಡಿ ನವೀಕರಣ ಸೌಲಭ್ಯ ವಿಸ್ತರಿಸಿ ಆದೇಶಿಸಲಾಗಿದೆ.
ಪರಿಶಿಷ್ಟ ಜಾತಿ, ಪಂಗಡಗಳ ರೈತರು 7 ವರ್ಷಗಳ ನಂತರ ಅದೇ ಜಮೀನಿಗೆ ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಇತರೆ ವರ್ಗದ ರೈತರಿಗೂ ಕೂಡ ಸಬ್ಸಿಡಿ ನವೀಕರಣ ಸೌಲಭ್ಯ ವಿಸ್ತರಿಸಿ ಸರ್ಕಾರ ಆದೇಶಿಸಿದೆ. ಈ ಹಿಂದೆ ಇತರೆ ವರ್ಗದ ರೈತರಿಗೂ ಒಂದು ಸಲ ಮಾತ್ರ ಒಂದು ನಿರ್ದಿಷ್ಟ ಜಮೀನಿಗೆ ಹನಿ ನೀರಾವರಿ, ತುಂತುರು ನೀರಾವರಿ ಘಟಕಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಎಲ್ಲಾ ಜಿಲ್ಲೆಗಳ ಇತರೆ ವರ್ಗದ ರೈತರು ನಿರ್ಬಂಧ ಸಡಿಲಿಸಲು ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಕ್ರಮ ಕೈಗೊಂಡಿದ್ದಾರೆ. ಇತರೆ ವರ್ಗದ ರೈತರ ಮೇಲಿನ ನಿರ್ಬಂಧ ಸಡಿಸಿಸಿ 7 ವರ್ಷದ ನಂತರ ಮತ್ತದೇ ಜಮೀನಿಗೆ ಸಬ್ಸಿಡಿ ನವೀಕರಣದ ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ.