ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ನೆಲದ ಮೇಲಿಡಬಾರದು

ಧರ್ಮಗ್ರಂಥಗಳ ಪ್ರಕಾರ ಕೆಲವೊಂದು ವಸ್ತುಗಳನ್ನು ನೆಲಕ್ಕೆ ಇಡಬಾರದು. ನೆಲಕ್ಕಿಟ್ಟರೆ ಮನುಷ್ಯ ನರಕಕ್ಕೆ ಹೋಗ್ತಾನೆ ಎನ್ನಲಾಗುತ್ತದೆ. ಯಾವ್ಯಾವ ವಸ್ತುಗಳನ್ನು ಎಂದೂ ನೆಲಕ್ಕೆ ಇಡಬಾರದು ಗೊತ್ತಾ…?

ಸಾಲಿಗ್ರಾಮ, ಸಾಲಿಗ್ರಾಮದ ನೀರನ್ನು ಎಂದೂ ನೆಲಕ್ಕೆ ಹಾಕಬಾರದು. ಧಾರ್ಮಿಕ ಗ್ರಂಥಗಳಲ್ಲಿ ಸಾಲಿಗ್ರಾಮ ನೀರನ್ನು ಶುಭವೆಂದು ಪರಿಗಣಿಸಲಾಗಿದೆ. ನೆಲಕ್ಕೆ ಹಾಕಿದ್ರೆ ನರಕ ಪ್ರಾಪ್ತಿಯಾಗುತ್ತದೆ.

ಶಂಖ, ದೀಪ, ಯಂತ್ರ, ಹೂ, ತುಳಸಿದಳ, ಕರ್ಪೂರ, ಶ್ರೀಗಂಧವನ್ನು ಕೂಡ ನೆಲಕ್ಕೆ ಇಡಬಾರದು. ಶುಭ ಕಾರ್ಯಗಳಿಗೆ ಇವುಗಳನ್ನು ಬಳಸಲಾಗುತ್ತದೆ. ಹಾಗಾಗಿ ಇವುಗಳನ್ನು ನೇರವಾಗಿ ನೆಲದ ಮೇಲೆ ಇಡಬಾರದು.

ಮುತ್ತು, ವಜ್ರ, ಮಾಣಿಕ್ಯ ಮತ್ತು ಚಿನ್ನ ಇವು ಅಮೂಲ್ಯ ರತ್ನಗಳು ಮತ್ತು ಲೋಹಗಳು ಎಂದು ಹೇಳಲಾಗುತ್ತದೆ.  ಅವುಗಳನ್ನು ನೇರವಾಗಿ ನೆಲದ ಮೇಲೆ ಇಡುವುದು ಅವುಗಳಿಗೆ ಅವಮಾನ ಮಾಡಿದಂತೆ.

ಕಪ್ಪೆ ಚಿಪ್ಪು ಲಕ್ಷ್ಮಿ ದೇವಿಗೆ ಸಂಬಂಧಿಸಿದ್ದು. ಹಾಗಾಗಿ ಅದನ್ನು ನೇರವಾಗಿ ನೆಲಕ್ಕೆ ಇಡಬಾರದು. ಬ್ರಾಹ್ಮಣರಿಗೆ ಸಂಬಂಧಿಸಿದ ಜನಿವಾರವನ್ನು ಕೂಡ ನೆಲಕ್ಕೆ ಇಡಬಾರದು. ಜ್ಞಾನವು ಪುಸ್ತಕದಿಂದ ಬಂದಿದೆ. ಅದನ್ನು ಪೂಜಿಸಲಾಗುತ್ತದೆ. ಈ ಕಾರಣಕ್ಕಾಗಿ ಅವುಗಳನ್ನು ನೇರವಾಗಿ ನೆಲದ ಮೇಲೆ ಇಡಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read