ಮೋದಿ ಫೋಟೋಶೂಟ್ ಮಾಡಿಸಲು ಎಷ್ಟೆಲ್ಲಾ ಕಸರತ್ತು….! ವಿಡಿಯೋ ಟ್ವೀಟ್‌ ಮಾಡಿ ಕಾಂಗ್ರೆಸ್‌ ವ್ಯಂಗ್ಯ

ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ  ನರೇಂದ್ರ  ಮೋದಿಯವರು ಕರ್ನಾಟಕಕ್ಕೆ  ಆಗಮಿಸಿದ್ದ ವೇಳೆ   ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ರೋಡ್‌ ಶೋ ನಡೆಸಿದ್ದರು.

ಆಪಾರ ಸಂಖ್ಯೆಯಲ್ಲಿ ಈ ರೋಡ್‌ ಶೋ ವೀಕ್ಷಣೆಗೆ ಆಗಮಿಸಿದ್ದ ಸಾರ್ವಜನಿಕರು ಪ್ರಧಾನಿಯವರ ಮೇಲೆ ಪುಷ್ಪವೃಷ್ಟಿ ಮಾಡಿದ್ದರು.

ಇದಕ್ಕೆ ಟ್ವೀಟ್‌ ಮೂಲಕ  ಟಾಂಗ್‌ ನೀಡಿರುವ ಕಾಂಗ್ರೆಸ್‌, ಮೋದಿ ಮೆಚ್ಚಿಸಲು, ಮೋದಿಯ ಫೋಟೋಶೂಟ್ ಮಾಡಿಸಲು ಎಷ್ಟೆಲ್ಲಾ ಕಸರತ್ತುಗಳು……. ಜನರೂ ಸ್ವಯಂಪ್ರೇರಿತವಾಗಿ ಬಂದಿದ್ದಲ್ಲ, ಹೂವನ್ನೂ ಜನರು ತಂದಿದ್ದಲ್ಲ, ಬಿಜೆಪಿಯದ್ದೆಲ್ಲವೂ ನಕಲಿ ನಾಟಕಗಳು ! ಈ ಹೂವುಗಳೆಲ್ಲವೂ ಕನ್ನಡಿಗರ ಕಿವಿ ಮೇಲೆ ಇಟ್ಟಿದ್ದ ಹೂವುಗಳಲ್ಲವೇ ಬಿಜೆಪಿ ಕರ್ನಾಟಕ ಎಂದು ಪ್ರಶ್ನಿಸಿದೆ.

https://twitter.com/INCKarnataka/status/1655203921789583361

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read